ದೆಹಲಿ: ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಇದೀಗ ದೆಹಲಿಯನ್ನು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವ ಪ್ರಶ್ನೆ ಚರ್ಚೆಗೆ ಬಂದಿದೆ.
ಕೇಂದ್ರ ಸಚಿವ ಅಮಿತ್ ಶಾಗೆ, ದೆಹಲಿಯ ಚಾಂದಿನಿಚೌಕ್‌ನ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರಿಂದ ಈ ಕುರಿತಾಗಿ ಪತ್ರ ಬರೆಯಲಾಗಿದೆ. ದೆಹಲಿಯ ಪ್ರಾಚೀನ ನಾಗರಿಕತೆಯ ಬೇರುಗಳನ್ನು ಉಲ್ಲೇಖಿಸುತ್ತಾ, ಇಂದ್ರಪ್ರಸ್ಥ ನಗರವನ್ನು ಹಳೆಯ ಐತಿಹಾಸಿಕ ಹೆಸರುಗಳಿಂದ ಸಂಪರ್ಕಿಸುವುದು ಮುಖ್ಯ ಎಂದು ಅವರಿಗೆ ತೋರಿಸಲಾಗಿದೆ. ಪತ್ರದಲ್ಲಿ ಹಳೆ ದೆಹಲಿ ರೈಲು ನಿಲ್ದಾಣವನ್ನು ಇಂದ್ರಪ್ರಸ್ಥ ಜಂಕ್ಷನ್ ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವ ಶಿಫಾರಸು ಮಾಡಲಾಗಿದೆ.
ಮಹಾಭಾರತದ ಪುರಾಣ ಕಥೆಯ ಪ್ರಕಾರ, ಪಾಂಡವರು ಹಸ್ತಿನಾಪುರದಿಂದ ಬೇರ್ಪಟ್ಟ ನಂತರ ಇಂದ್ರಪ್ರಸ್ಥದಲ್ಲಿ ರಾಜಧಾನಿ ಸ್ಥಾಪಿಸಿದ್ದರು. ದ್ರೌಪದಿಯ ಸ್ವಯಂವರದ ನಂತರ ಧೃತರಾಷ್ಟ್ರನು ಪಾಂಡವರಿಗೆ ಖಾಂಡವಪ್ರಸ್ಥದ ಪಾಳುಭೂಮಿಯನ್ನು ನೀಡಿದ್ದು, ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಅದನ್ನು ಮಾಯಾನಗರಿಯಾಗಿ ನಿರ್ಮಿಸಲಾಯಿತು. ಇಂದಿನ ಹಳೆಯ ದೆಹಲಿಯ ಹಳೆಭಾಗವು ಅದೇ ಐತಿಹಾಸಿಕ ಇಂದ್ರಪ್ರಸ್ಥ ನಗರಕ್ಕೆ ಸಂಬಂಧಿಸಿರುವುದಾಗಿ ತಿಳಿದುಬರುತ್ತದೆ. ಯಮುನಾ ನದಿ ತೀರದಲ್ಲಿ ದೇವಲೋಕದ ಶಿಲ್ಪಿಗಳು ಮತ್ತು ಮಯಾಸುರನಿಂದ ನಿರ್ಮಿತವಾದ ವೈಭವೋಪೇತ ಪ್ರಾಚೀನ ನಗರ ಎಂಬ ಭಾವನೆ ಈ ಸ್ಥಳಕ್ಕೆ ಇದ್ದು, ಮರುನಾಮಕರಣದ ಕುರಿತ ಚರ್ಚೆಯನ್ನು ಪ್ರಚೋದಿಸಿದೆ.



