ಹಾಸನಾಂಬೆ ದೇವಿಯ ದರ್ಶನಕ್ಕೆ ದಾಖಲೆ ಸಂಖ್ಯೆ ಭಕ್ತರು: ದೇವಸ್ಥಾನಕ್ಕೆ ₹17 ಕೋಟಿ ಆದಾಯ

0
Spread the love

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಿಗೆ ಭಕ್ತರ ನದಿಯೇ ಹರಿದುಬರುತ್ತಿದೆ. ಅಕ್ಟೋಬರ್‌ 10ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ನಿನ್ನೆ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

Advertisement

ಹಾಸನಾಂಬೆ ದೇವಸ್ಥಾನವು ಈವರೆಗೆ ₹17 ಕೋಟಿ ಆದಾಯ ಗಳಿಸಿದೆ — ₹1000 ಹಾಗೂ ₹300 ವಿಶೇಷ ದರ್ಶನ ಟಿಕೆಟ್‌ಗಳ ಜೊತೆಗೆ ಲಾಡು ಪ್ರಸಾದ ಮಾರಾಟದಿಂದ ಈ ಮೊತ್ತ ಬಂದಿದೆ.

ನಾಳೆ ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಅದ್ಧೂರಿಯಾಗಿ ತೆರೆ ಬೀಳಲಿದೆ. ಇಂದು ಬೆಳಗ್ಗೆ 7:30ರ ತನಕ ಸಾಲುಗಳು ಖಾಲಿಯಾಗಿದ್ದರೂ, ಆ ಬಳಿಕ ಭಕ್ತರ ದಿಢೀರ್‌ ಏರಿಕೆ ಕಂಡುಬಂದಿದೆ. ಧರ್ಮ ದರ್ಶನದಿಂದ ಹಿಡಿದು ವಿಶೇಷ ದರ್ಶನದ ಸಾಲುಗಳವರೆಗೆ ಜನಸಂದಣಿ ಉಂಟಾಗಿದೆ. ಅಮಾವಾಸ್ಯೆ ಪ್ರಯುಕ್ತ ಹಾಸನ ನಗರ ಸಂಪೂರ್ಣ ಭಕ್ತರ ಸಾಗೋರಾಪಾದಿಯಂತೆ ಪರಿವರ್ತನೆಗೊಂಡಿದೆ.


Spread the love

LEAVE A REPLY

Please enter your comment!
Please enter your name here