ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆ ಏರಿಕೆ! ಬೆಚ್ಚಿಬೀಳಿಸುವಂತಿದೆ ಆರೋಗ್ಯ ಇಲಾಖೆ ಅಂಕಿಅಂಶ

0
Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು  ಸೇರಿದಂತೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಾಯ್ತನದ ವಯಸ್ಸಿಗೂ ಮೊದಲೇ ರಾಜ್ಯದಲ್ಲಿ ಬಾಲ ಗರ್ಭಿಣಿಯರು ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಹೌದು ಕೆಲವು ತಂದೆ-ತಾಯಿಗಳಿಗೆ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂಬ ಭಾವನೆ ಇರುತ್ತದೆ.

Advertisement

ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು ದೌರ್ಜನ್ಯ ಹಾಗೂ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆಗೆ ಕಾರಣವಾಗುತ್ತಿದೆ. ಕರ್ನಾಟಕದಲ್ಲಿ18 ವರ್ಷ ತುಂಬುವುದಕ್ಕಿಂತ ಮೊದಲೇ ಗರ್ಭಿಣಿ ಆಗುತ್ತಿರುವವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯದಲ್ಲಿ 3,37,000ಕ್ಕೂ ಹೆಚ್ಚು ಟೀನೇಜ್ ಪ್ರೆಗ್ನೆನ್ಸಿ ದಾಖಲಾಗಿರುವ ಬಗ್ಗೆ ಆತಂಕಕಾರಿ ಸುದ್ದಿ ಇದೀಗ ಬಯಲಾಗಿದೆ.

ಕಳೆದ 10 ತಿಂಗಳಲ್ಲೇ 10 ಸಾವಿರ ಗಡಿದಾಟಿದೆ ಹದಿಹರೆಯದ ಗರ್ಭಧಾರಣೆ. ರಾಜಧಾನಿಯಲ್ಲಿಯೂ ವರ್ಷದಿಂದ ವರ್ಷಕ್ಕೆ ಟೀನೇಜ್ ಪ್ರೆಗ್ನೆನ್ಸಿ ಏರಿಕೆ ಕಂಡುಬರುತ್ತಿದೆ. ಬೆಂಗಳೂರು ಅರ್ಬನ್​ನಲ್ಲಿ ಕಳೆದ ಮೂರು ವರ್ಷದಲ್ಲಿ 9000ಕ್ಕೂ ಹೆಚ್ಚು ಹದಿಹರೆಯದ ಪ್ರೆಗ್ನೆನ್ಸಿ ದಾಖಲಾಗಿದೆ.

ರಾಜಧಾನಿಯಲ್ಲಿಯೂ ವರ್ಷದಿಂದ ವರ್ಷಕ್ಕೆ ಟೀನೇಜ್ ಪ್ರೆಗ್ನೆನ್ಸಿ ಏರಿಕೆ ಆಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಬೆಂಗಳೂರು ಅರ್ಬನ್​ನಲ್ಲಿ 8900 ಪ್ರಕರಣಗಳು ಕಂಡುಬಂದಿವೆ. ಬಾಲ ತಾಯಂದಿರ ಬಗ್ಗೆ ಆರೋಗ್ಯ ಇಲಾಖೆಯೇ ನೀಡಿರುವ ಅಂಕಿ-ಸಂಖ್ಯೆಗಳು ಸದ್ಯ ಬೆಚ್ಚಿಬೀಳಿಸುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ನಾನಾ ಪ್ಲಾನ್ ರೂಪಿಸಲು ಮುಂದಾಗಿದೆ.

ಬೆಂಗಳೂರು- 1,113, ಉಡುಪಿ- 26, ದಕ್ಷಣಿ ಕನ್ನಡ- 69, ಉತ್ತರ ಕನ್ನಡ- 86, ಬೆಳಗಾವಿ- 963, ಧಾರವಾಡ- 216, ದಾವಣಗೆರೆ- 240, ಬಾಗಲಕೋಟೆ- 393, ವಿಜಯಪುರ- 714, ರಾಯಚೂರು- 562, ತುಮಕೂರು- 690, ಚಿತ್ರದುರ್ಗ- 401, ಮೈಸೂರು- 558, ಹಾಸನ- 341, ಬಳ್ಳಾರಿ- 271, ಕಲಬುರಗಿ- 415, ಶಿವಮೊಗ್ಗ- 220, ವಿಜಯಪುರ- 714, ಚಿಕ್ಕಬಳ್ಳಾಪುರ- 259, ಚಿಕ್ಕಮಗಳೂರು- 169, ಕೋಲಾರ- 296.

ಬಾಲ ಗರ್ಭಿಣಿಯಾಗುವುದರಿಂದ ತಾಯಿ, ಮಗುವಿನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇದ್ದು, ಸರ್ಕಾರ ಈ ಬಗ್ಗೆ ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕಿದೆ.


Spread the love

LEAVE A REPLY

Please enter your comment!
Please enter your name here