ಮಚ್ಚು ಹಿಡಿದು ರೀಲ್ಸ್: ಜೈಲಿನಿಂದ ರಜತ್, ವಿನಯ್ ಗೌಡ ರಿಲೀಸ್!

0
Spread the love

ಬೆಂಗಳೂರು:- ಮಚ್ಚು ಹಿಡಿದು ರೀಲ್ಸ್ ಮಾಡಿದ್ದು ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಜೈಲು ಪಾಲಾಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

Advertisement

ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್ ಮತ್ತು ವಿನಯ್‌ಗೆ ಶುಕ್ರವಾರ 24ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಪೊಲೀಸರ ಕೈಗೆ ಬೇಲ್ ಪ್ರತಿ ತಡವಾಗಿ ಸಿಕ್ಕ ಹಿನ್ನೆಲೆ ಇಂದು ರಜತ್ ಹಾಗೂ ವಿನಯ್ ಜೈಲಿನಿಂದ ರಿಲೀಸ್ ಆಗಿದ್ದಾರೆ.

ಘಟನೆ ಹಿನ್ನೆಲೆ:-

ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ರಜತ್, ವಿನಯ್‌ರನ್ನು ಬಂಧಿಸಲಾಗಿತ್ತು. ಮಾ.26ರಿಂದ ಮಾ.28ರವರೆಗೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಆದೇಶ ನೀಡಿತ್ತು. ನಿನ್ನೆ ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.


Spread the love

LEAVE A REPLY

Please enter your comment!
Please enter your name here