`ಶರಣರ ಶಕ್ತಿ’ ಚಿತ್ರದ ಹಾಡುಗಳ ಬಿಡುಗಡೆ

0
cinema suddi
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : 12ನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ಬಸವಣ್ಣ ಎನ್ನುವುದು ಆಕರ್ಷಣೀಯವಾಗಿದ್ದವು. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ `ಶರಣರ ಶಕ್ತಿ’ ಹೆಸರಿನ ಚಿತ್ರ ಸಿದ್ಧವಾಗುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಪ್ರಚಾರದ ಮೊದಲ ಹಂತವಾಗಿ ಬಸವ ಜಯಂತಿಯ ಮುನ್ನಾದಿನ ರೇಣುಕಾಂಬಾ ಸ್ಟುಡಿಯೋದಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು.

Advertisement

ಶ್ರೀಷ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ಮಹೇಶ್‌ಬಾಬು ಅವರಲ್ಲಿ ಕೆಲಸ ಕಲಿತುಕೊಂಡಿರುವ ದಿಲೀಪ್ ಶರ್ಮ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಅನುಭವ ಮಂಟಪದ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿ, ಬಸವಣ್ಣ ಇಂದಿಗೂ ಯಾಕೆ ಪ್ರಸ್ತುತ ಎಂಬುದನ್ನು ಇದರಲ್ಲಿ ನಿರೂಪಣೆ ಮಾಡಿದ್ದಾರೆಂಬುದು ತಿಳಿದು ಬಂದಿದೆ. ಬಸವಣ್ಣನವರು ಸಾರ್ವಕಾಲಿಕವಾದವರು. ಸರ್ಕಾರವು ನೂತನ ಅನುಭವ ಮಂಟಪಕ್ಕೆ ಹಣ ಮಂಜೂರು ಮಾಡಿದೆ. ಕೆಲಸಗಳು ಸದ್ಯದಲ್ಲೇ ಶುರುವಾಗಲಿದೆ. ಚಿತ್ರವು ಎಲ್ಲರನ್ನೂ ತಲುಪಲಿ ಎಂದರು.

ಬಸವಣ್ಣನಾಗಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು, ಶೀಲವಂತನಾಗಿ ವಿಶ್ವರಾಜ್ ರಾಜ್‌ಗುರು, ಚನ್ನಬಸವಣ್ಣನಾಗಿ ಧ್ರುವ ಶರ್ಮ, ಉಳಿದಂತೆ ರಮೇಶ್ ಪಂಡಿತ್, ಸಾಚಿ ಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ಅಬ್ದುಲ್ ಲತೀಫ್ ಹಾಗೂ 140 ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಸಂಗೀತ ವಿನು ಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ನಿರ್ವಹಿಸಿದ್ದಾರೆ. ಋಷಿಕುಮಾರ ಸ್ವಾಮೀಜಿ, ಮುನಿವೆಂಕಟಪ್ಪ ಸುಂದರ ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.


Spread the love

LEAVE A REPLY

Please enter your comment!
Please enter your name here