ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ವಾದ ವಿವಾದ ಆಲಿಸಿದ 57ನೇ ಸಿಸಿಎಚ್ ನ್ಯಾಯಾಲಯ ಇಂದು ಆದೇಶ ಪ್ರಕಟಿಸಲಿದೆ.
ಈಗಾಗಲೇ ತೀರ್ಪು ಕಾಯ್ದಿರಿಸಿರುವ ರವಿ ಶಂಕರ್, ಲಕ್ಷ್ಮಣ್, ನಾಗರಾಜ್ ಮತ್ತು ದೀಪಕ್ ಅವರ ಅರ್ಜಿಗಳ ತೀಪನ್ನು ಸಹ ಇದೇ ವೇಳೆ ಪ್ರಕಟಿಸಲಿದೆ. ಜಾಮೀನು ನೀಡುವಂತೆ ದರ್ಶನ್ ಪರ ಸಿ.ವಿ.ನಾಗೇಶ್, ಜಾಮೀನು ನೀಡದಂತೆ ಪ್ರಸನ್ನ ಕುಮಾರ್ ಇಬ್ಬರೂ ಪ್ರಬಲ ವಾದ ಮಂಡಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಲೋಪ ದೋಷಗಳಿವೆ ಎಂದು ಹಲವು ಅಂಶಗಳನ್ನು ಸಿ.ವಿ.ನಾಗೇಶ್ ಉಲ್ಲೇಖಿಸಿದ್ದಾರೆ.ಅರೇಬಿ ಯನ್ ನೈಟ್ಸ್ ಕತೆಯಂತೆ ಇದೆ. ತನಿಖೆ ಅತ್ಯಂತ ಕಳಪೆಯಾಗಿದೆ. ಸ್ಥಳ ಮಹಜರು ಮತ್ತು ಪಂಚನಾಮೆಗೆ ಹೋಲಿಕೆಯಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಈ ಕೊಲೆ ಪ್ರಕರಣ ಕ್ರೂರವಾದ ರಕ್ತ ಚರಿತ್ರೆ.ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗ ಳು, ಫೋಟೋಗಳು ಇವೆ. ಅ ಆರೋಪಿ ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಬಲ ಸಾಕ್ಷಿಗಳಿವೆ ಎಂದು ವಾದಿಸಿದ್ದರು.
ವಾದ-ಪ್ರತಿವಾದ ಆಲಿಸಿರುವ ನ್ಯಾಯಾದೀಶರು ಆದೇಶ ಕಾಯ್ದಿರಿಸಿದ್ದರು ಇಂದು ಜಾಮೀನು ಆದೇಶ ಹೊರ ಬೀಳುವುದಿಂದ ಎಲ್ಲರ ಚಿತ್ತ ಕೋರ್ಟ್ ಆದೇಶದತ್ತ ನೆಟ್ಟಿದೆ.