HomeKarnataka Newsರೇಣುಕಾಸ್ವಾಮಿ ಕೊಲೆ ಕೇಸ್: ಪೊಲೀಸರೇ ಸಾಕ್ಷ್ಯ ಸೃಷ್ಟಿಸಿದ್ದಾರೆಂದ ದರ್ಶನ್ ಪರ ವಕೀಲ!

ರೇಣುಕಾಸ್ವಾಮಿ ಕೊಲೆ ಕೇಸ್: ಪೊಲೀಸರೇ ಸಾಕ್ಷ್ಯ ಸೃಷ್ಟಿಸಿದ್ದಾರೆಂದ ದರ್ಶನ್ ಪರ ವಕೀಲ!

For Dai;y Updates Join Our whatsapp Group

Spread the love

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಆರೋಪಿ ದರ್ಶನ್ ಪರ ಸಿಸಿಹೆಚ್ 57ನೇ ನ್ಯಾಯಾಲಯದಲ್ಲಿ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ದಾರೆ.

ಈ ವೇಳೆ ಈ ಪ್ರಕರಣದ ತನಿಖೆ ತುಂಬಾ ಕೆಟ್ಟದ್ದಾಗಿ ನಡೆದಿದೆ. ಸುಪ್ರೀಂ ಕೋರ್ಟ್‌ನ 2 ತೀರ್ಪು ಉಲ್ಲೇಖಿಸಿ, ಇಡೀ ಪ್ರಕರಣ ಕಪೋಲಕಲ್ಪಿತ ಕಥೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ ಎಂದು ಪ್ರಬಲ ವಾದ ಮಂಡಿಸಿದರು.

ವಾದ ಆರಂಭಿಸುತ್ತಿದ್ದಂತೆ ಮೊದಲು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳು ಟ್ರಯಲ್ ಮಾಡಿದ್ದಾವೆ. ಸ್ವಇಚ್ಚಾ ಹೇಳಿಕೆ, ಫೋಸ್ಟ್ ಮಾರ್ಟ್ಂ ರಿಪೋರ್ಟ್, ಐ ವಿಟ್ನೆಸ್ ಅನ್ನು ಬಿತ್ತರ ಮಾಡಿವೆ.

ತನಿಖೆಯ ಪ್ರತೀ ಹಂತದಲ್ಲೂ ಕೂಡ ಟ್ರಯಲ್ ಮಾಡಿದ್ದಾವೆ. ಜೀವಾವಧಿ ಅಥವಾ ಸಮನಾಂತರ ಶಿಕ್ಷೆ ಹೊಂದಿರೋ ಪ್ರಕರಣ ಇದು ಇದನ್ನು ವಿಧಿಸೋದು ಬಾಕಿ ಇದೆ. ಇನ್ನೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.

ಎಸ್‌ಪಿಪಿ ಅತ್ಯುತ್ತಮ ತನಿಖೆ ಅಂತ ಕೋರ್ಟ್‌ಗೆ ಹೇಳಿದ್ದಾರೆ. ಆದರೆ ಇದು ನನ್ನ ಪ್ರಕಾರ ತುಂಬಾ ಕೆಟ್ಟದಾದ ತನಿಖೆ ಎನ್ನುತ್ತಾ ಸುಪ್ರೀಂ ಕೋರ್ಟ್ನ ಎರಡು ತೀರ್ಪುಗಳ ಉಲ್ಲೇಖಿಸಿ ವಾದ ಮಂಡಿಸಿದರು. ಈ ವೇಳೆ ತೀರ್ಪಿನ ಪ್ರತಿಯನ್ನು ಎಸ್‌ಪಿಪಿ ಕೇಳಿದರು. ಅದಕ್ಕೆ ಗರಂ ಆದ ಸಿ.ವಿ ನಾಗೇಶ್, ನಾನು ಕೆಲಸ ಮಾಡಿ ತಂದಿರೋ ತೀರ್ಪು ಇದು. ನಾನು ನಿಮಗೆ ಪ್ರತಿ ಕೊಡೋಲ್ಲ, ಪ್ರಸನ್ನ ನೀವೇ ಹುಡುಕಿ ಎಂದರು.

ಮೀಡಿಯಾದಲ್ಲಿ ದಿನಾ ಟ್ರಯಲ್ ಮಾಡಿ ಪ್ರಚಾರ ನೀಡುತ್ತಾ ಇದ್ದಾರೆ. ಮೀಡಿಯಾದಲ್ಲಿ ಆರೋಪಿಗಳ ಸ್ವ ಇಚ್ಛಾ ಹೇಳಿಕೆ ಬಂದಿದೆ. ಅಲ್ಲದೇ ಮೃತ ದೇಹದ ಫೋಟೋ ತೋರಿಸಿದ್ದಾರೆ. ಆತನ ಮುಖವನ್ನು ನಾಯಿ ತಿಂದಿದೆ, ಅಂತ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಆದರೆ ಮಾಧ್ಯಮದಲ್ಲಿ ಇದನ್ನೇ ಕ್ರೌರ್ಯ ಅಂತ ಹೇಳಿದ್ರು. ಹಲ್ಲೆ ಎಂದು ಬಿಂಬಿಸಿ ಸುದ್ದಿ ಸಹ ಮಾಡಿವೆ. ನಾಯಿ ಕಚ್ಚಿ ಅವನ ಮುಖ ತಿಂದಿದೆ. ಇದೆನ್ನೆಲ್ಲಾ ಪರಿಗಣಿಸಿ ಕೋರ್ಟ್ ತನಿಖಾಧಿಕಾರಿಗೆ ತರಾಟೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.

ಪ್ರಕರಣದಲ್ಲಿ ಎಲ್ಲಾ ರಿಕವರಿ ಸುಳ್ಳು ರಿಕವರಿ ಆಗಿದೆ. ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆಗಳು, ಹಗ್ಗದ ತುಂಡುಗಳನ್ನು ರಿಕವರಿ ಎಂದು ತೋರಿಸಿದ್ದಾರೆ. ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ. 12-6 ರಲ್ಲಿ ಇದೆಲ್ಲವನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ 9 ಜೂನ್ ಅಲ್ಲಿಯೇ ಪೊಲೀಸರ ವಶದಲ್ಲಿ ಇತ್ತು. ಈ ವಸ್ತುಗಳನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಇಲ್ಲಿ ದಿನಾಂಕಗಳ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!