ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿ ಗೋವಿನಜೋಳ ಖರೀದಿಗೆ ನೋಂದಣಿ ಹೆಚ್ಚಿಸುವಂತೆ ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಗುರುವಾರ ಶಿರಹಟ್ಟಿ ತಹಸೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ ಕಪ್ಪತ್ತನವರ, ಶಿರಹಟ್ಟಿ ತಾಲೂಕಿಗೆ ಒಟ್ಟು 58 ಹಳ್ಳಿಗಳಿದ್ದು, ನಮ್ಮ ಸಂಘದಲ್ಲಿ ಈವರೆಗೆ ಇಥೆನಾಲ್ಗೆ 71 ಖಾತೆಗಳು ಮತ್ತು ಪೌಲ್ಟರಿಗೆ 145 ಖಾತೆಗಳು ಮಾತ್ರ ನೋಂದಣಿಯಾಗಿವೆ. ಈವರೆಗೆ ನಮ್ಮ ಸಂಘದಲ್ಲಿ 1 ಸಾವಿರಕ್ಕೂ ಹೆಚ್ಚು ರೈತರು ಸರದಿಯಲ್ಲಿದ್ದಾರೆ. ಅವರೆಲ್ಲರೂ ಡಿ.7ರಿಂದ ನೋಂದಣಿಗಾಗಿ ಕಾಯುತ್ತಾ ಕುಳಿತಿದ್ದಾರೆ, ನಮ್ಮ ಸಂಘಕ್ಕೆ ದಿನವೂ ಬಂದು ಹೋಗುತ್ತಿದ್ದಾರೆ. ಆದ್ದರಿಂದ ತಾಲೂಕಿಗೆ ಮೊದಲ ಪ್ರಾಶಸ್ತ್ಯ ಕೊಟ್ಟು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.



