ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪ್ರಸ್ತುತ ವರ್ಷದಲ್ಲಿ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಮೆಣಸಿನಕಾಯಿ, ಗೋವಿನಜೋಳ, ಬಿಟಿ ಹತ್ತಿ ಬೆಳೆಗಳು ಸತತ ಮಳೆಯಿಂದಾಗಿ ನಷ್ಟವಾಗಿದೆ. ರೈತ ಬಾಂಧವರು ಆರ್ಥಿಕ ಸಂಕಷ್ಟದಲ್ಲಿದ್ದು, ಈಗಾಗಲೇ ವಿಮಾ ಕಂಪನಿಗೆ ವಿಮಾ ಮೊತ್ತವನ್ನು ಭರಿಸಿದ್ದಾರೆ. ಕೂಡಲೇ ವಿಮಾ ಕಂಪನಿ ಮಧ್ಯಂತರ ಬೆಳೆ ಪರಿಹಾರ ನೀಡಲು ಆಗ್ರಹಿಸಿ ಗದಗ ಜಂಟಿ ಕೃಷಿ ಉಪನಿದೇರ್ಶಕಿ ಜಿ.ಎಸ್. ಸ್ಪೂರ್ತಿ, ಮುಳಗುಂದ ಕಂದಾಯ ಇಲಾಖಾಧಿಕಾರಿ ಎಸ್.ಎಸ್. ಪಟ್ಟೆದ, ಮುಳಗುಂದ ಕೃಷಿ ಅಧಿಕಾರಿ ಎಸ್.ಎಫ್. ಗುರಿಕಾರ ಅವರಿಗೆ ಮುಳಗುಂದ ಹಸಿರು ಸೇನೆ ರೈತ ಸಂಘಟನೆ ಹಾಗೂ ರೈತ ಬಾಂಧವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವರಾಜ ಸಂಗನಪೇಟಿ, ಪ್ರಸ್ತುತ ವರ್ಷದಲ್ಲಿ ಮುಂಗಾರು ಹಂಗಾಮಿನ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ರೈತ ಬಾಂಧವರು ನಷ್ಟ ಅನುಭವಿಸುವಚಿತಾಗಿದೆ. ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದರು.
ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ, ಬಸವರಾಜ ಕರಿಗಾರ, ಮುತ್ತಪ್ಪ ಬಳ್ಳಾರಿ, ನಾಗೇಶ ಬಾಳಿಕಾಯಿ, ಮಮ್ಮದಲಿ ಶೇಖ, ಶಂಕ್ರಯ್ಯ ಹಿರೇಮಠ, ಕಿರಣ ಕುಲಕರ್ಣಿ, ದೇವಪ್ಪ ಅಣ್ಣಿಗೇರಿ, ಮಾಹಾಂತೇಶ ಗುಂಜಳ, ಮುತ್ತಪ್ಪ ಪಲ್ಲೆದ, ದೇವಪ್ಪ ದೊಟಿಕಲ್ಲ ಮುಂತಾದವರಿದ್ದರು.