ವಿಜಯಸಾಕ್ಷಿ ಸುದ್ದಿ, ಮುಳುಗುಂದ : ಮುಳುಗುಂದ ಈದ್ಗಾ ಮೈದಾನದ ಅಭಿವೃದ್ಧಿಯ ಅನುದಾನ ಬಿಡುಗಡೆ ಮಾಡುವಂತೆ ಖಿದ್ಮತ್-ಎ-ಮಿಲ್ಲತ್ ಗ್ರೂಪ್ ವತಿಯಿಂದ ಗದಗ ಜಿಲ್ಲಾ ವಕ್ಪ ಸಲಹಾ ಸಮಿತಿ ಅಧ್ಯಕ್ಷ ಜಿ.ಎಂ. ದಂಡಿನ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈಗಿರುವ ಈದ್ಗಾ ಮೈದಾನವು ಚಿಕ್ಕದಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ನಮಾಜ್ ಮಾಡಲು ಜಾಗದ ಅಡಚಣೆ ಉಂಟಾಗುತ್ತಿದೆ. ಇನ್ನಷ್ಟು ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸುವ ಉದ್ದೇಶವಿದ್ದು, ಅಭಿವೃದ್ಧಿಗೆ ಅನುದಾನ ಕೊರತೆ ಇರುವುದರಿಂದ ಅನುದಾನವನ್ನು ಶೀಘ್ರವೇ ವಕ್ಫನಿಂದ ಬಿಡುಗಡೆ ಮಾಡುವಂತೆ ಸಂಘದ ವತಿಯಿಂದ ಹಿರಿಯರಾದ ತಾಜುದ್ದೀನ್ ಕಿಂಡ್ರಿಯವರು ಮನವಿ ಓದಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಹಮೀದ ಮುಜಾವರ, ರಫೀಕ ದಲೀಲ, ರಾಜೇಸಾಬ ಸೈಯದಬಡೆ, ಚಮನಸಾಬ ಹಾದಿಮನಿ, ಹೈದರಅಲಿ ಖವಾಸ, ಮುನ್ನಾ ಢಾಲಾಯತ, ಹುಸೇನ ಅಕ್ಕಿ, ಮಾಬುಲಿ ದುರ್ಗಿಗುಡಿ, ಖಲಂದರ ಗಾಡಿ, ದಾವೂದ್ ಜಮಾಲ್ ಮುಂತಾದವರು ಉಪಸ್ಥಿತರಿದ್ದರು.