ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಮುಸ್ಲಿಂ ಸಮುದಾಯ ನಿಯೋಜಿತ ಸಮಿತಿ ಗದಗ ವತಿಯಿಂದ ವಕ್ಫ್ ಜಿಲ್ಲಾಧ್ಯಕ್ಷರಿಗೆ ಗದಗ-ಬೆಟಗೇರಿ ಅಂಜುಮನ್-ಏ-ಇಸ್ಲಾಂ ಸಂಸ್ಥೆಗೆ ಚುನಾವಣೆಗೆ ಘೋಷಿಸಲು ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಅಧ್ಯಕ್ಷರು, ಹಲವು ವರ್ಷಗಳಿಂದ ಗದಗ ಅಂಜುಮನ್ ಸಂಸ್ಥೆಗೆ ಚುನಾವಣೆ ನಡೆದಿಲ್ಲ. ಮುಂದಿನ ಜಿಲ್ಲಾ ಬೋರ್ಡ್ನ ಸಭೆಯಲಿಡೀ ವಿಷಯನ್ನು ತೆಗೆದುಕೊಂಡು ರಾಜ್ಯ ಸಮಿತಿಗೆ ಕಳುಹಿಸಿ ಬೈಲಾ ಅನುಮೋದನೆ ಪಡೆದು, ಚುನಾವಣೆ ಪ್ರಕ್ರಿಯೆಯನ್ನು ನಡೆಸುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಮಸಜ್ಜೀದ ಎ ಇಸ್ಮಾಯಲ್, ಅಬೂಬಕರ ಮಜ್ಜೀದ, ಬೆಟಗೇರಿ-ಗದಗ ರಹೆಮಾನಶಾವಲಿ ದರ್ಗಾ ಮತ್ತು ಮಸಜೀದ ಕಮಿಟಿ, ಅಲ್ ಅರಪಾತ ಜಮಾತ ಟ್ರಸ್ಟ್, ಯಾಸೀರ ಏಜ್ಯುಕೇಶನಲ್ ಆ್ಯಂಡ್ ಸೋಷಿಯಲ್ ವೆಲ್‌ಫೇರ್ ಟ್ರಸ್ಟ್ ಯಾಸೀರ ಮಸಜೀದ ಮುಸ್ಲಿಂ ಜಮಾತ, ಮಸಜೀದ ಎ ರಹತ, ನೂರಾನಿ ಮಸ್ಜೀದ ಮುಸ್ಲಿಂ ಜಮಾತ, ಖಾನಬಾಗ ಮುಸ್ಲಿಂ ಜಮಾತ, ಅಕ್ಷಾ ಮಜೀದ ಜಮಾತ್, ಮುಬಾರಕ ಮಸಜೀದ, ಇಸ್ಲಾಮಿಯಾ ಜಮಾತ್, ನೌಜವಾನ ಯಂಗ್ ಕಮಿಟಿ, ರಹಮನಿಯಾ ಮಜ್ಜೀದ ಜಮಾತ್, ಅಲ್ಲಾ ನರಗರಡಿ ಮುಸ್ಲಿಂ ಜಮಾತ್, ಅಹದ್ ಜಮಾತ, ನಿಜಾಮುದ್ದೀನ ಜಮಾತ, ಮುಕ್ತುಮ್ ಮಜ್ಜೀದ್, ಈ ಎಲ್ಲ ಜಮಾತಿನವರು, ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.