ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಹೆಚ್ಚಿನ ರೈತರು ಕಳೆದ ವರ್ಷ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆ ಹೆಚ್ಚು ಬೆಳೆದು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಕಂಗಲಾಗಿದ್ದರು. ಇನ್ನು ಮೆಣಸಿನಕಾಯಿಯನ್ನು ಮನೆಯಲ್ಲಿಯೇ ದಾಸ್ತಾನು ಮಾಡಿಟ್ಟುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ.
ಈ ವರ್ಷ ಅಲ್ಪ ಸ್ವಲ್ಪ ಮಳೆಯಾಗಿದೆ. ಈಗ 15 ದಿನದಿಂದ ಸುರಿದ ಮಳೆಗೆ ಹೆಸರು ಬೆಳೆಗೆ ಕೀಟ ಬಾಧೆ ತಗುಲಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯೂ ಇಲ್ಲದಂತಾಗಿದೆ. ಸರಕಾರದ msp ದರ 8500 ರೂಗಳಿಗಿಂತ ಹೆಚ್ಚು ಇದ್ದು, ಮಾರುಕಟ್ಟೆಯಲ್ಲಿ ದಲ್ಲಾಳಿಗಳು 4 ರಿಂದ 5 ಸಾವಿರಕ್ಕೆ ಖರೀದಿ ಮಾಡುತ್ತಿದ್ದಾರೆ. ರೈತರ ಪರವಾಗಿ ಇರಬೇಕಾದ ಸರಕಾರ ರೈತರ ವಿರೋಧಿಯಾಗಿದೆ.
ಶೀಘ್ರದಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ರೋಣ ತಾಲೂಕು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮು ಚರೇದ, ಬಿಜೆಪಿ ಮುಖಂಡರಾದ ಇಸ್ಮಾಯಿಲ್ ಗದಗ, ಸಂಗಪ್ಪ ಗುದ್ಲಿ, ಅಜಿತ್ ನಾಗನೂರ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.