ವಿಜಯಸಾಕ್ಷಿ ಸುದ್ದಿ, ಗದಗ : ನಿವೃತ್ತ ನೌಕರರಿಗೆ 2020ರ ಹೊಸ ಕೈಗಾರಿಕಾ ವೇತನ ಒಪ್ಪಂದದ ಅನ್ವಯ ವ್ಯತ್ಯಾಸದ ಹಣ ಪಾವತಿಸಬೇಕೆಂದು ಬೆಮಸಾ, ಕರಾಸಾ ಮತ್ತು ವಾಕರಸಾ ಸಾರಿಗೆ ನಿವೃತ್ತ ನೌಕರರ ಸಂಘವು ಹುಬ್ಬಳ್ಳಿಯ ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಿಗೆ ಮನವಿ ಸಲ್ಲಿಸಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿವೃತ್ತ ನೌಕರರ ಸಂಘದ ಸಂಚಾಲಕ ಎಚ್.ಸಿ. ಕೊಪ್ಪಳ ಹಾಗೂ ಹನಮಂತಪ್ಪ ಎಚ್.ದೊಡ್ಡಮನಿ ಅವರ ನೇತೃತ್ವದಲ್ಲಿ ಎಲ್ಲ ನಿವೃತ್ತ ನೌಕರರು ಹುಬ್ಬಳ್ಳಿಯ ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಿಗೆ ಮನವಿ ಸಲ್ಲಿಸಿದರು.
ಸರಕಾರದ ಹೊಸ ಕೈಗಾರಿಕಾ ವೇತನ ಒಪ್ಪಂದದ ಪ್ರಕಾರ 2020ರಿಂದ ಹಾಲಿ ನೌಕರರು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಕಚೇರಿಯ ಲೆಕ್ಕ ಶಾಖೆಯ ವೈಫಲ್ಯತೆಯಿಂದ ನಿವೃತ್ತ ನೌಕರರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಸಂಸ್ಥೆಯು ನಿವೃತ್ತ ನೌಕರರ ಹೊಸ ವೇತನವನ್ನು ನಿಷ್ಕರ್ಷ ಮಾಡಿಲ್ಲ. ಆದ್ದರಿಂದ ಸಾರಿಗೆ ಸಂಸ್ಥೆಯ ರಾಜ್ಯದ ನಾಲ್ಕೂ ವಿಭಾಗದ ಆಡಳಿತ ಮಂಡಳಿ ಲೆಕ್ಕ ಶಾಖೆಗೆ ತುರ್ತಾಗಿ ಆದೇಶ ಮಾಡಿ ನಿವೃತ್ತ ನೌಕರರ ವ್ಯತ್ಯಾಸ ಹಣವನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಂಡು ನಿವೃತ್ತ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಗದಗ ಬಿ.ಜಿ. ಕೆಂಗಾರಕರ, ಜಿ.ಎಂ.ಮನಿಯಾರ, ಸೋಲೇಮಾನ ಬನ್ನೂರ, ಅಣ್ಣಿಗೇರಿ, ಮುಕಾಸಿ ಹಾಗೂ ಎಸ್.ಟಿ. ಮುಂಡರಗಿ, ಹಾವೇರಿಯ ಎಸ್.ಎನ್. ಕಮ್ಮಾರ, ಬೆಳಗಾವಿಯ ಎಂ.ಎನ್. ಪಾಟೀಲ, ಜಿ.ಆರ್. ಕುಂಬಾರ, ಹುಬ್ಬಳ್ಳಿಯ ಸುರೇಶ ಬೆಟಗೇರಿ, ಬಾಗಲಕೋಟಿಯ ಎಸ್.ಎನ್. ಕುಲಕರ್ಣಿ, ಬಿ.ಎನ್. ಮಾಳಗಿ, ಎಂ.ವೈ. ತೊಲಗಿ, ಚಂದ್ರು ಕಾಂಬಳೆ, ರವೀಂದ್ರ ಪಾತ್ರಮಿರಕ್, ಹರೀಶ ಬಾಳೇಗುಡಿ ಹಾಗೂ ಲಕ್ಷö್ಮಣ ಅಂಬಲಿ ಸೇರಿದಂತೆ ಸಂಘದ ನಿವೃತ್ತ ನೌಕರರು ಹಾಜರಿದ್ದರು.



