ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕ ವತಿಯಿಂದ ಬಣ್ಣದ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ನಗರದ ಗಾಂಧಿ ವೃತ್ತದಿಂದ ನಗರಸಭೆಯವರೆಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಎಚ್.ಅಬ್ಬಿಗೇರಿ ಮಾತನಾಡಿ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ 3ನೇ ವಾರ್ಡ್ ಬಿ.ಬಿ. ಬಣ್ಣದ ನಗರದಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ. ಜರ್ಮನಿ ಆಸ್ಪತ್ರೆಯಿಂದ ನಗರಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದನ್ನು ಸರಿಪಡಿಸಬೇಕು. ಬಣ್ಣದ ನಗರಕ್ಕೆ ಹೋಗುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಲ್ಲದೆ, ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಗಟಾರ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಿಂಗನಗೌಡ ಮಾಲೀಪಾಟೀಲ, ವಿನಾಯಕ ಬದಿ, ಮಾರುತಿ ಈಳಿಗಾರ, ತೌಸೀಪ ಢಾಲಾಯತ್, ಆಶಾ ಜುಳಗುಡ್ಡ, ಹನುಮಪ್ಪ ಪೂಜಾರಿ, ರತ್ನಮ್ಮ ಯಲಬುರ್ಗಾ, ಶರಣಪ್ಪ ಪುರಟಗೇರಿ, ಮುತ್ತಣ್ಣ ಚವಡಣ್ಣವರ, ಹುಸೇನ ಅಕ್ಕಿ, ಸಲೀಂ ಶಿರವಾರ, ರೆಹಮಾನ ದರ್ಗಾದ, ರಫೀಕ್, ಶಿರಾಜ ಹೊಸಮನಿ, ಯಲ್ಲಪ್ಪ ಗೊಕಾಕ, ಶ್ರಿಕಾಂತ ಪೂಜಾರಿ, ಶಿವು ಮಠದ, ಕಾಂತೇಶ, ಲಕ್ಷ್ಮಣ ಕಮ್ಮಾರ, ಗೌಡಪ್ಪ, ರಮೇಶ, ಶಿವಪ್ಪ, ವರಮ್ಮ, ಜ್ಯೋತಿ, ಸರೋಜಮ್ಮ, ಮಾಲವ್ವ, ಬಸಮ್ಮ ಮುಂತಾದವರಿದ್ದರು.