ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಅಂಜುಮನ್ ಸರಕಾರಿ ಪದವಿಪೂರ್ವ ಕಾಲೇಜಿನ 2024-25ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು, 1ರಿಂದ 10ನೇ ತರಗತಿವರೆಗೆ ಉರ್ದು ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉರ್ದು ಕೋರ್ಸ್ ಇಲ್ಲದ ಕಾರಣ ಅನಿವಾರ್ಯವಾಗಿ ಬೇರೆ ಊರುಗಳಿಗೆ ಅಲೆಯುವ ಪರಿಸ್ಥಿತಿ ಒದಗಿದ್ದು, ಊರಿನ ಹಿರಿಯರು ಹಾಗೂ ಖಿದ್ಮತ್-ಎ-ಮಿಲ್ಲತ್ ಗ್ರೂಪ್‌ನ ಸದಸ್ಯರು ಸಚಿವ ಡಾ. ಎಚ್.ಕೆ. ಪಾಟೀಲರನ್ನು ಭೇಟಿಯಾಗಿ ಕಾಲೇಜಿನಲ್ಲಿ ಉರ್ದು ಕೋರ್ಸ್ ಪ್ರಾರಂಭಿಸಲು ಮನವಿ ಸಲ್ಲಿಸಿದರು.
ಸಚಿವರು ಸದರಿ ಮನವಿಗೆ ಸ್ಪಂದಿಸಿದ್ದು, ಕೋರ್ಸ್ ಪ್ರಾರಂಭಿಸಲು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೂಪ್‌ನ ಸದಸ್ಯರಾದ ತಾಜುದ್ದೀನ ಕಿಂಡ್ರಿ, ಹಮೀದ ಮುಜಾವರ, ರಪೀಕ ದಲೀಲ, ಮಹ್ಮದಇಸ್ಮಾಯಿಲ್ ಖಾಜಿ, ಇಮಾಮಸಾಬ ಖವಾಸ, ಹೆಚ್.ಎಂ. ನದ್ದೀಮುಲ್ಲಾ, ರಾಜೇಸಾಬ ಸೈಯದಬಡೆ, ಚಮನಸಾಬ ಹಾದಿಮನಿ, ಹೈದರಅಲಿ ಖವಾಸ, ಮುನ್ನಾ ಢಾಲಾಯತ್, ದಾವೂದ್ ಜಮಾಲ್, ಮಾಬುಲಿ ದುರ್ಗಿಗುಡಿ, ಜಿಲಾನಿ ಶೇಖ್, ನಜೀರ ಢಾಲಾಯತ್, ಹೈದರ ಶೇಖ್ ಹಾಜರಿದ್ದರು.