ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಎಸ್‌ಬಿಐ ಬ್ಯಾಂಕಿನ ಎಟಿಎಂ ಕಳೆದ 3 ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಎಟಿಎಂ ಸೇವೆ ಒದಗಿಸಲು ಎಸ್‌ಬಿಐ ಬ್ಯಾಂಕ್ ಮುಂದಾಗಬೇಕು ಎಂದು ಒತ್ತಾಯಿಸಿ ಇಲ್ಲಿನ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಮನವಿ ನೀಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ ಮಾತನಾಡಿ, ಗಜೇಂದ್ರಗಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಸಾವಿರಾರು ಗ್ರಾಹಕರಿಗೆ ಎಟಿಎಂ ಸೌಲಭ್ಯವನ್ನು ನೀಡುವುದು ಬ್ಯಾಂಕಿನ ಕರ್ತವ್ಯಗಳಲ್ಲಿ ಒಂದಾಗಿದೆ.
ಇದಕ್ಕಾಗಿಯೇ ಬ್ಯಾಂಕ್ ಪ್ರತಿ ಗ್ರಾಹಕರಿಂದ ಅಂದಾಜು 140 ರೂಪಾಯಿಗಳನ್ನು ಪಡೆಯುತ್ತಿದ್ದೆ. ಆದರೆ ಕಳೆದ ಕೆಲ ತಿಂಗಳಿನಿಂದ ಎಸ್‌ಬಿಐ ಎಟಿಎಂ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿಲ್ಲ. ಬ್ಯಾಂಕಿನಲ್ಲಿ ರೈತರ ಸಾಲವನ್ನು ಕೊಡಿಸಲು ಎಜೆಂಟರ್ ಹಾವಳಿಯಿದೆ ಎನ್ನುವ ದೂರುಗಳಿವೆ. ಅಲ್ಲದೆ ಸಾಲ ಪಡೆಯುವವರು ಪಾಲಸಿ ಮಾಡಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಬ್ಯಾಂಕಿನ ಸೌಲಭ್ಯಗಳು ಗ್ರಾಹಕರಿಗೆ ಹಾಗೂ ರೈತರಿಗೆ ನೇರವಾಗಿ ತಲುಪುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಗದೀಶ ಮಡಿವಾಳರ, ಶಾಮೀದ್ ಮಾಲ್ದಾರ್, ಮಾರುತಿ ಬರಗಿ, ಮುತ್ತು ರೇಣಿ, ರಾಜು ಮಾಳೊತ್ತರ, ಸಂಗಪ್ಪ ಪತಂಗರಾಯ, ಷಣ್ಮುಖ ಖಾತರಕಿ, ವೆಂಕಟೇಶ ಚಿನ್ನೂರ, ಮುತ್ತು ಬುಗಡಿ ಇದ್ದರು.