ನವದೆಹಲಿ:– ಕೆಲವೇ ತಿಂಗಳುಗಳಲ್ಲಿ ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್ ಕೋಸ್ಟರ್ ಅವಘಡದಲ್ಲಿ ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ ಜರುಗಿದೆ.
24 ವರ್ಷದ ಪ್ರಿಯಾಂಕಾ ಮೃತ ಮಹಿಳೆ. ದೆಹಲಿಯ ಹೊರವಲಯದಲ್ಲಿರುವ ಜನಪ್ರಿಯ ಮನೋರಂಜನಾ ಉದ್ಯಾನವನದಲ್ಲಿ ಈ ದುರಂತ ಸಂಭವಿಸಿದೆ. ನಿಶ್ಚಿತಾರ್ಥವಾದ ವರನೊಂದಿಗೆ ನೈಋತ್ಯ ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ರೋಲರ್ ಕೋಸ್ಟರ್ ಆಡುವಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಪ್ರಿಯಾಂಕಾ ತನ್ನ ನಿಶ್ಚಿತ ವರ ನಿಖಿಲ್ ಜೊತೆ ವಾಟರ್ & ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಿದ್ದರು. ಸ್ವಿಂಗ್ ತರಹದ ರೈಡ್‌ನಲ್ಲಿ ಕುಳಿತಿದ್ದ ಪ್ರಿಯಾಂಕಾ, ಸ್ಟ್ಯಾಂಡ್ ಮುರಿದಾಗ ಎತ್ತರದಿಂದ ಕೆಳಗೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪ್ರಿಯಾಂಕಾ 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2026 ರ ಫೆಬ್ರವರಿಗೆ ಮದುವೆ ನಿಗದಿಯಾಗಿತ್ತು. ಆದರೆ ವಿಧಿಯಾಟ ಬಾಳಿ ಬದುಕಬೇಕಾಗಿದ್ದ ಮಹಿಳೆ ಇದೀಗ ಇಹಲೋಕ ತ್ಯಜಿಸಿದ್ದಾರೆ.


