HomeIndia Newsವಕ್ಫ್ ತಿದ್ದುಪಡಿ ಮಸೂದೆಗೆ ಬಿತ್ತು ರಾಷ್ಟ್ರಪತಿ ಅಂಕಿತ: ಈಗ ಅಧಿಕೃತ ಕಾನೂನು!

ವಕ್ಫ್ ತಿದ್ದುಪಡಿ ಮಸೂದೆಗೆ ಬಿತ್ತು ರಾಷ್ಟ್ರಪತಿ ಅಂಕಿತ: ಈಗ ಅಧಿಕೃತ ಕಾನೂನು!

For Dai;y Updates Join Our whatsapp Group

ನವದೆಹಲಿ:- ವಿಪಕ್ಷಗಳು ತೀವ್ರ ವಿರೋಧ ಮಾಡಿದ್ದ ವಕ್ಫ್ ತಿದ್ದುಪಡಿ ಮಸೂದೆಗೆ ಕೊನೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ಮೂಲಕ ಅಧಿಕೃತ ಕಾನೂನಾಗಿದೆ.

ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ, ಮಸೂದೆಗೆ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಇದಕ್ಕೂ ಮೊದಲು, ಗುರುವಾರ ಮುಂಜಾನೆ ಲೋಕಸಭೆಯಲ್ಲಿ 288 ಸದಸ್ಯರು ಬೆಂಬಲಿಸಿದರೆ, 232 ಸದಸ್ಯರು ವಿರೋಧಿಸಿದರು. ಈ ರೀತಿಯಾಗಿ, ಎರಡೂ ಸದನಗಳಲ್ಲಿ ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿಗಳ ಒಪ್ಪಿಗೆಗೆ ರವಾನೆಯಾಗಿತ್ತು.

ಪರ ವಿರೋಧಗಳ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ರಾತ್ರಿ ವಕ್ಫ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನಾಗಿದೆ. ಇದೇ ವೇಳೆ ಮುರ್ಮು ಅವರು, ಮುಸಲ್ಮಾನ್ ವಕ್ಫ್ ಮಸೂದೆ 2025ಕ್ಕೆ ಸಹ ಒಪ್ಪಿಗೆ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img