• About
  • Advertise
  • Privacy & Policy
  • Contact
Saturday, November 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

Vijaya Sakshi News Desk by Vijaya Sakshi News Desk
November 28, 2026
in Gadag News
ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ
0
SHARES
1
VIEWS
Share on Facebook

ಡಂಬಳ: ನಾನು ರೈತಾಪಿ ಕುಟುಂಬದಿಂದ ಬಂದವನಾಗಿದ್ದು, ರೈತರ ಕಷ್ಟ-ನೋವುಗಳನ್ನು ಹತ್ತಿರದಿಂದ ಅರಿತಿದ್ದೇನೆ. ಹೀಗಾಗಿ ರೋಣ ವಿಧಾನಸಭಾ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಸಂಕಲ್ಪ ಹೊಂದಿದ್ದೇನೆ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಡೋಣಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

2023-24ನೇ ಸಾಲಿನ ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಸೌಕರ್ಯ ಯೋಜನೆಯಡಿ ₹181.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡ ಹಾಗೂ 15ನೇ ಹಣಕಾಸು ಯೋಜನೆಯಡಿ ₹61 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದರು.

ಅಲ್ಲದೆ, 2024-25ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಅನುದಾನ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಗ್ರಾಮದ 6ನೇ ವಾರ್ಡ್‌ನ ಗೂಳಿ ಬಸವೇಶ್ವರ ದೇವಸ್ಥಾನದ ಹತ್ತಿರ ಹಾಗೂ ಡಿಪಿಪಿ ಶಾಲೆಯ ಸಮೀಪದ ವಿದ್ಯಾನಗರದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿದರು. ಕೆಜಿಎಸ್ ಶಾಲೆಯಲ್ಲಿ ₹27.10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಎರಡು ನೂತನ ಕೊಠಡಿಗಳನ್ನೂ ಲೋಕಾರ್ಪಣೆಗೊಳಿಸಿದರು.

2026-27ನೇ ಸಾಲಿನಲ್ಲಿ ಡೋಣಿ ಗ್ರಾಮದಿಂದ ಹಿರೇವಡ್ಡಟ್ಟಿ ಗ್ರಾಮದವರೆಗೆ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಹಾಗೂ ₹20 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಈ ಭಾಗದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯದಂತೆ ಇಲ್ಲಿ ಹಣ್ಣಿನ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ತೋಟಗಾರಿಕೆ ಕಾಲೇಜು ಪ್ರಾರಂಭಿಸಲಾಗುವುದು. ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮುಖ್ಯರಸ್ತೆಯ ಪಕ್ಕದಲ್ಲಿರುವ ಮಠದ 12 ಎಕರೆ ಜಮೀನನ್ನು ದಾನವಾಗಿ ನೀಡುತ್ತಿದ್ದಾರೆ. ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನಲ್ಲಿಯೇ ಕಾಲೇಜು ಆರಂಭಿಸಲಾಗುವುದು. ಇದರಿಂದ ಈ ಭಾಗದ ರೈತರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡೋಣಿ ಗ್ರಾಮದಲ್ಲಿ ಉತ್ತಮ ಶಾಲಾ ಕಟ್ಟಡಗಳು ನಿರ್ಮಾಣವಾಗಿವೆ. ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು. ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಹಾಗೂ ಆಟದ ಮೈದಾನದಲ್ಲಿ ಕ್ರೀಡೆಯಲ್ಲಿ ತೊಡಗುವ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾದಾಗ ಮಾತ್ರ ದೇಶವೂ ಬಲಿಷ್ಠವಾಗಲು ಸಾಧ್ಯ. ಇದಕ್ಕೆ ಪೂರಕವಾದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ಪಾಲಕರು ವಹಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಮುಖ್ಯವಾಗಿದೆ. ಶಾಲೆಗಳನ್ನು ಸ್ಮಾರ್ಟ್‌ಕ್ಲಾಸ್‌ಗಳನ್ನಾಗಿ ರೂಪಿಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು. ಅದರಂತೆ ಡೋಣಿ ಗ್ರಾಮದಲ್ಲಿ 12 ಶಾಲಾ ಕಟ್ಟಡಗಳು ನಿರ್ಮಾಣವಾಗಿವೆ. ಡಂಬಳ ಹೋಬಳಿಯ ಬಹುತೇಕ ಶಾಲೆಗಳಿಗೂ ಅನುದಾನ ಒದಗಿಸುವ ಮೂಲಕ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಸ್ಮಾರ್ಟ್‌ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುತ್ತಿರುವ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಡಿ.ಡಿ. ಮೋರನಾಳ, ವಕೀಲರಾದ ಬಿ.ಎಸ್. ಕೇರಿ, ಕಾಶಪ್ಪ ಅಳವುಂಡಿ, ಕೆ.ವೈ. ಹೊನ್ನೂರ, ರಾಮಣ್ಣ ಮೇಗಲಮನಿ, ಹನಮಂತಗೂಡಿ, ಈಶಪ್ಪ ಓಲಿ, ಭರಮಪ್ಪ ಕಿಲಾರಿ, ಗೋಣಿಬಸಪ್ಪ ಕೊರ್ಲಹಳ್ಳಿ, ಜಗದೀಶ ಮೇನಳ್ಳಿ, ಬಸವರಡ್ಡಿ ಬಂಡಿಹಾಳ,
ಡಿಡಿಪಿಐ ಕೆ.ಡಿ. ಬಡಿಗೇರ, ತಹಶೀಲ್ದಾರ್ ರಾಧಾ ಕುಂಬಾರ, ಉಮೇಶ ಎಸ್., ನಾಗೇಂದ್ರ ಪಟ್ಟಣಶೆಟ್ಟಿ, ಇಒ ವಿಜಯಕುಮಾರ ಬೆಣ್ಣೆ, ಗ್ರಾಮದ ಹಿರಿಯರು, ಯುವಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ರೈತರ ಕಷ್ಟ-ನೋವುಗಳನ್ನು ಹತ್ತಿರದಿಂದ ಅರಿತಿದ್ದೇನೆ. ರೋಣ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವುದು ನನ್ನ ಸಂಕಲ್ಪ. ಈ ಭಾಗದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸುವ ಮೂಲಕ ರೈತರ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಲು ಶ್ರಮಿಸಲಾಗುವುದು.

— ಜಿ.ಎಸ್. ಪಾಟೀಲ, ವಿಧಾನಸಭಾಧ್ಯಕ್ಷರು

Tags: Dambal HobliDony VillageFarmer WelfareG.S. PatilGadag districtHorticulture CollegeKarnataka Assembly SpeakerKarnataka DevelopmentLake Filling ProjectRona ConstituencyRural developmentSchool InfrastructureTontada Siddhaling SwamijiVijayasakshi
ShareSendShare
Previous Post

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Vijaya Sakshi E-Paper 28 Nov 2026
28 Nov 2026
Read E-Paper
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

November 28, 2026
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

November 27, 2026
ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

ಬೆಂಗಳೂರಿನ ಪೆಟ್ರೋಲ್‌ನಲ್ಲಿ ಎಥನಾಲ್ ಗೋಲ್‌ಮಾಲ್? IOCL ಟರ್ಮಿನಲ್‌ಗೆ ಸರ್ಕಾರದ ನೋಟಿಸ್!

November 27, 2026
ವಿದ್ಯುತ್ ದುರಸ್ತಿ ಮುಗಿಸಿ ವಾಪಸ್ ಆಗುವಾಗ ದುರಂತ;  ಹಿಟ್‌ ಆ್ಯಂಡ್‌ ರನ್‌ಗೆ ಲೈನ್‌ಮ್ಯಾನ್ ಸಾವು

ವಿದ್ಯುತ್ ದುರಸ್ತಿ ಮುಗಿಸಿ ವಾಪಸ್ ಆಗುವಾಗ ದುರಂತ; ಹಿಟ್‌ ಆ್ಯಂಡ್‌ ರನ್‌ಗೆ ಲೈನ್‌ಮ್ಯಾನ್ ಸಾವು

November 27, 2026

Recent News

4
Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

November 28, 2026
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper