ವಿಜಯಸಾಕ್ಷಿ ಸುದ್ದಿ, ಗದಗ : ಆಯುರ್ವೇದ ಔಷಧಿ ಪದ್ಧತಿಯು ತ್ರಿದೋಷಗಳೆಂದು ಕರೆಯುವ ವಾತ, ಪಿತ್ತ, ಕಫ ಇವುಗಳ ಮೇಲೆ ಆಧಾರಿತವಾಗಿದ್ದು, ಪ್ರತಿಯೊಬ್ಬರೂ ವಿಭಿನ್ನ ಪ್ರಕೃತಿಯವರಾಗಿರುತ್ತಾರೆ. ಅವರು ತಮ್ಮ ಪ್ರಕೃತಿಗೆ ತಕ್ಕಂತೆ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ರಾಜೀವಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ. ಶಿವಕುಮಾರ ಸರ್ವಿ ತಿಳಿಸಿದರು.
ರೋಟರಿ ಸಂಸ್ಥೆ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆಗೆ ಅತಿಥಿಗಳಾಗಿ ಆಗಮಿಸಿ, ಆಯುರ್ವೇದ ಕುರಿತು ಅವರು ಉಪನ್ಯಾಸ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಚಂದ್ರಮೌಳಿ ಜಾಲಿ ಸ್ವಾಗತಿದರು. ಅಸಿಸ್ಟಂಟ್ ಗವರ್ನರ್ ರೊ. ಶರಣಬಸಪ್ಪ ಗುಡಿಮನಿ, ರೊ. ಮಹೇಶ ಕುಂದ್ರಾಳಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ವೀಣಾ ತಿರ್ಲಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಯ ಸದಸ್ಯರಾದ ರೊ. ಶ್ರೀಧರ ಸುಲ್ತಾನಪೂರ, ರೊ. ಡಾ.ಶೇಖರ ಡಿ.ಸಜ್ಜನರ, ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ಇಂ. ಮಹಾಂತೇಶ ಬಾತಾಖಾನಿ, ರೊ. ಹೆಚ್.ಎಸ್. ಪಾಟೀಲ, ರೊ. ವಿಶ್ವನಾಥ ಯಳಮಲಿ, ರೊ. ಸುರೇಶ ಕುಂಬಾರ, ರೊ. ಅನಿಲ ಹಂದ್ರಾಳ, ರೊ. ಡಾ. ಎಸ್.ಕೆ. ನಾಲತ್ತವಾಡಮಠ, ರೊ. ಡಾ. ಪ್ರದೀಪ ಉಗಲಾಟ, ರೊ. ಕೊಟ್ರೇಶ ಹಿರೇಗೌಡರ, ರೊ.ಡಾ. ಕಮಲಾಕ್ಷಿ ಅಂಗಡಿ, ರೊ. ನರೇಶ ಜೈನ, ರೊ. ಸಂತೋಷ ಅಕ್ಕಿ, ರೊ.ಡಾ. ಆರ್.ಬಿ. ಉಪ್ಪಿನ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹಿಂದೂ ಸಂಸ್ಕೃತಿಯ ಹಬ್ಬಗಳಿಲ್ಲಿ ತಯಾರಿಸುವ ಆಹಾರ ವಿಧಾನವು ವೈಜ್ಞಾನಿಕವಾಗಿದ್ದು, ಅದನ್ನು ಅನುಸರಿಸುವುದು ಉತ್ತಮ. ಆಯುರ್ವೇದ ಶಾಸ್ತ್ರವು ಪ್ರತಿಯೊಂದು ದೋಷವು ಅಸಮತೋಲನನವಾದಾಗ ಯಾವ ರೀತಿ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದು, ಅದನ್ನು ಸಮತೋಲನ ಮಾಡುವ ವಿಧಾನವನ್ನು ತಿಳಿಸಿರುವ ಅತಿ ಪುರಾತನವಾದ ಔಷಧ ಪದ್ಧತಿಯಾಗಿದೆ ಎಂದು ಡಾ. ಶಿವಕುಮಾರ ಸರ್ವಿ ವಿವರಿಸಿದರು.