HomeGadag Newsನಾಳೆಯಿಂದ `ರೋಟರಿ ಉತ್ಸವ-2024'

ನಾಳೆಯಿಂದ `ರೋಟರಿ ಉತ್ಸವ-2024′

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಗದಗ ಸೆಂಟ್ರಲ್ ಕ್ಲಬ್‌ನ ವತಿಯಿಂದ ಜುಲೈ 8ರಿಂದ 11ರವರೆಗೆ `ರೋಟರಿ ಉತ್ಸವ-2024′ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಗದಗ ಸೆಂಟ್ರಲ್ ಕ್ಲಬ್‌ನ ಅಧ್ಯಕ್ಷ ರೊ. ವಿಜಯಕುಮಾರ ಹಿರೇಮಠ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದಗ ಸಾಂಸ್ಕೃತಿಕ ನಗರವಾಗಿದ್ದು, ಸಂಗೀತ, ಕಲೆ, ನೃತ್ಯಕ್ಕೆ ಪ್ರೋತ್ಸಾಹ ನೀಡುವ ಸ್ಥಳವಾಗಿದೆ. ಇಂತಹ ಕಲೆಗೆ ಪೂರಕವಾಗಿ ನಮ್ಮ ಕ್ಲಬ್ ‘ರೋಟರಿ ಉತ್ಸವ-2024’ ಎಂಬ ಶೀರ್ಷಿಕೆಯೊಂದಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ. ರೋಟರಿ ಸಿಂಗಿಂಗ್ ಸ್ಟಾರ್ ಆಫ್ ಗದಗ, ರೋಟರಿ ಡ್ಯಾನ್ಸಿಂಗ್ ಸ್ಟಾರ್ ಆಪ್ ಗದಗ ಎಂಬ ಕಾರ್ಯಕ್ರಮವನ್ನು ಜು.8ರಂದು ಮಧ್ಯಾಹ್ನ 2 ಗಂಟೆಗೆ ಗದಗ ಜಿಲ್ಲೆಯ ಕಲಾಸಕ್ತಿಯುಳ್ಳ ಪ್ರತಿಭಾವಂತರಿಗೆ ಏರ್ಪಡಿಸಿದ್ದು, ವಯೋಮಿತಿ ಕನಿಷ್ಠ 15 ವರ್ಷ ತುಂಬಿರಬೇಕು. ಜು. 11ರಂದು ಟ್ರೆಡಿಶನಲ್ ಫ್ಯಾಶನ್ ಶೋ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ತಿಳಿಸಿದರು.

ಈ ಸ್ಪರ್ಧೆಗಳಲ್ಲಿ ವಿಜೇತರಾರವರಿಗೆ ಬಹುಮಾನಗಳನ್ನು ನೀಡಲಾಗುವುದು. ಕಾರ್ಯಕ್ರಮಗಳನ್ನು ಡಾ. ಎಸ್.ವ್ಹಿ. ತೋಟಗಂಟಿಮಠ ಪ್ಯಾರಾ ಮೆಡಿಕಲ್ ಕಾಲೇಜು ಸಂಭಾಪೂರ ರಸ್ತೆ, ಪುಟ್ಟರಾಜನಗರದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 6362828782 ಸಂಪರ್ಕಿಸುವಂತೆ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಗದಗ ಜಿಲ್ಲಾ ಪಾಸ್ಟ್ ಅಸಿಸ್ಟಂಟ್ ಗರ್ವನರ್ ರೊ. ಶರಣಬಸಪ್ಪ ಗುಡಿಮನಿ, ಕಾರ್ಯದರ್ಶಿ ಡಾ. ಸಂತೋಷ ತೋಟಗಂಟಿಮಠ, ಖಜಾಂಚಿ ಸುನೀಲ ಕಬಾಡಿ, ಪ್ರೊ. ಕುಮಾರ ಒಡೆಯರ, ಸಂದೀಪ ಕಾಂಬಳೆ, ನಟರಂಗ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ ಚಿಕ್ಕಮಠ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!