26ಲಕ್ಷ ರೂ. ಹಣ ಸೀಜ್ ಕೇಸ್: ಮನನೊಂದ ಸಂಗಮೇಶ ಆತ್ಮಹತ್ಯೆಗೆ ಯತ್ನ!

0
Spread the love

ಗದಗ: ಬಡ್ಡಿ ದಂಧೆಯ ಆರೋಪದಲ್ಲಿ ಪೊಲೀಸರಿಂದ 26 ಲಕ್ಷ ರೂಪಾಯಿ ಹಣ ಸೀಜ್ ಪ್ರಕರಣದಲ್ಲಿ ಇದೀಗ ತಿರುವು ಸಿಕ್ಕಿದ್ದು, ಮಗುವಿನ ಲಿವರ್ ಚಿಕಿತ್ಸೆಗೆ ತಂದಿಟ್ಟಿದ್ದ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇದರಿಂದಾಗಿ ಸಂಗಮೇಶ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Advertisement

ಸಂಗಮೇಶ ದೊಡ್ಡಣ್ಣವರ್ ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ ಮೀಟರ್ ಬಡ್ಡಿ ಕುಳಗಳಿಗೆ ಖಾಕಿ ಶಾಕ್: ಗದಗ ನಗರದಲ್ಲಿ ಬೆಳ್ಳಂ ಬೆಳಗ್ಗೆ ದಾಳಿ, ದಂಧೆಯಲ್ಲಿ ಭಾಗಿಯಾಗಿದ್ದ ರೌಡಿಗಳು!

ಗದಗ ನಗರದ ಕಾಶಿ ವಿಶ್ವನಾಥ ಕಾಲೋನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ರಕ್ಷಣೆ ಮಾಡಿ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಲಾಗಿದೆ.ಬೆನ್ನು ಮೂಳೆ ಕಟ್ ಆಗಿರೋ ಸಾಧ್ಯತೆ ಇದ್ದು, ಸಂಗಮೇಶ್ ಸ್ಥಿತಿ ಚಿಂತಾಜನಕವಾಗಿದೆ.

ಸೀಜ್ ಮಾಡಿರೋ ಹಣ ಬಡ್ಡಿ ದಂಧೆಯದ್ದಲ್ಲ, ಮಗನ ಚಿಕಿತ್ಸೆಗೆ ಹೊಂದಿಸಿದ್ದ ಹಣ ಅಂತ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಗಮೇಶನ ಮಗನ ಲಿವರ್ ಆಪರೇಷನ್‌ ಗಾಗಿ 25 ಲಕ್ಷ ರೂ ಹಣ ಹೊಂದಿಸಲಾಗಿತ್ತು. ಆದರೆ ಹಣ ಸೀಜ್ ಆಗಿದ್ದಕ್ಕೆ ಸಂಗಮೇಶ ಮನನೊಂದಿದ್ದ ಎನ್ನಲಾಗಿದೆ.

ಕಳೆದ ಫೆ.9ನೇ ತಾರೀಖು ಗದಗ- ಬೆಟಗೇರಿ ಅವಳಿ ನಗರದ 12 ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದು, ದಾಳಿ ವೇಳೆ ಸಂಗಮೇಶ್ ಮನೆಯಲ್ಲಿ 26 ಲಕ್ಷ 57 ಸಾವಿರ ನಗದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದರು. ಅಂದು ಸಂಗಮೇಶ್ ಸೇರಿದಂತೆ 12 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.


Spread the love

LEAVE A REPLY

Please enter your comment!
Please enter your name here