ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಶತಾಬ್ದಿ ವರ್ಷದ ವಿಜಯದಶಮಿ ಪಥ ಸಂಚಲನವು ಪಟ್ಟಣದ ಕೆಂಪೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಮಟ್ಟೇರ ಓಣಿ, ಕೊಟ್ಟೂರು ರಸ್ತೆಯ ಮೂಲಕ ತೆಗ್ಗಿನ ಮಠ ಮುಂಭಾದಲ್ಲಿ ಸಾಗಿ ಹಳೇ ಬಸ್ಟಾಂಡ್ ಮೂಲಕ ಐಬಿ ವೃತ್ತದಲ್ಲಿ ಕೊನೆಗೊಂಡಿತು.
ಪಥ ಸಂಚಲನ ಸಾಗುವ ಪ್ರಮುಖ ಬೀದಿಯುದ್ದಕ್ಕೂ ಕೇಸರಿ ಬಾವುಟಗಳು ಕಂಗೊಳಿಸುತ್ತಿದ್ದವು. 500ಕ್ಕೂ ಅಧಿಕ ಗಣವೇಷಧಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ವಿಭಾಗ ಕಾರ್ಯವಾರು ಕೇಶವ್ ಜೀ, ಪ್ರಾಂತ ಬೌದ್ಧಿಕ ಪ್ರಮುಖ ದುರುಗಣ್ಣನವರ್, ಜಿಲ್ಲಾ ಕಾರ್ಯಕಾರಿಣಿ ಸತ್ಯನಾರಾಯಣ, ದಕ್ಷಿಣ ಪ್ರಾಂತ ಸೇವಾ ಸಂಯೋಜಕ ಕುಮಾರಸ್ವಾಮಿ, ವಿಭಾಗ ಕುಟುಂಬ ಪ್ರಬೋಧನ್ ಪ್ರಮುಖ ಕೃಷ್ಣಮೂರ್ತಿ, ತಾಲೂಕು ಕಾರ್ಯವಾಹಕ ಪಶುಪತಿ, ತಾಲೂಕು ಟೋಳಿ ಪ್ರಮುಖ ಮೌನೇಶ, ಗೌರಳ್ಳಿ ನಾಗರಾಜ, ಕೊಟ್ಟೂರು ದೇವರು, ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ, ಶೇಖರಪ್ಪ, ಲೋಕೇಶ್, ಮುದುಕವ್ವನವರ ಶಂಕರ್, ಕಡೆಮನಿ ಸಂಗಮೇಶ್ ಮುಂತಾದವರಿದ್ದರು.