ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತದ ಭೇಟಿಯ ಎರಡನೇ ದಿನದ ಕಾರ್ಯಕ್ರಮಗಳು ಇಂದು ನಡೆಯುತ್ತಿವೆ. ಬೆಳಿಗ್ಗೆ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಇನ್ನೂ ಇಂದು ಪುಟಿನ್ ಅವರು ಪ್ರಮುಖ ಭಾರತೀಯ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲಿದ್ದು, ಭಾರತ–ರಷ್ಯಾ ದೇಶಗಳ ನಡುವೆ ಹೂಡಿಕೆ, ವ್ಯಾಪಾರ ವಿಸ್ತರಣೆ ಹಾಗೂ ಆರ್ಥಿಕ ಸಹಕಾರದ ಬಗ್ಗೆ ಚರ್ಚೆ ನಡೆಯಲಿದೆ.
ಪುಟಿನ್ ಅವರು ಇಂದು ರಾಷ್ಟ್ರಪತಿ ಭವನಕ್ಕೂ ಭೇಟಿ ನೀಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕೃತ ಸ್ವಾಗತ ಪಡೆದರು. ಈ ಭೇಟಿಯ ಅಂಗವಾಗಿ ಬಿಲೇಟರಲ್ ಮಾತುಕತೆಗಳು ಮತ್ತು ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.



