ರಿದಮ್ ಕಿಂಗ್ ‘ಸರಿಗಮಪ’ ಕಾರ್ಯಕ್ರಮದ ಜ್ಯೂರಿ ಎಸ್.ಬಾಲಿ ವಿಧಿವಶ!

0
Spread the love

ರಿದಮ್ ಕಿಂಗ್ ಎಂದೇ ಹೆಸರು ಪಡೆದಿದ್ದ ‘ಸರಿಗಮಪ’ ಕಾರ್ಯಕ್ರಮದ ಜ್ಯೂರಿ ಎಸ್.ಬಾಲಿ ಅವರು ತಮ್ಮ 71ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ.

Advertisement

ಖ್ಯಾತ ವಾದ್ಯಗಾರರು, ಸಂಗೀತ ನಿರ್ದೇಶಕರು, ಸರಿಗಮಪ ವೇದಿಕೆಯ ಜ್ಯೂರಿಯಾಗಿದ್ದ ಶ್ರೀ ಎಸ್.ಬಾಲಸುಬ್ರಹ್ಮಣ್ಯಂ ಅವರು 71ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.

ರಿದಮ್ ಕಿಂಗ್ ಎಂದೇ ಫೇಮಸ್ ಆಗಿದ್ದ ಬಾಲಿ ಅವರ ಸಂಗೀತ ಸೇವೆಗೆ ಹಲವು ಪ್ರಶಸ್ತಿಗಳು ದಕ್ಕಿದೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಅವರ ಪಾಲಾಗಿತ್ತು. ಇದೀಗ ಅವರ ನಿಧನದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ.

ಎಸ್. ಬಾಲಿ ಅವರ ನಿಧನಕ್ಕೆ ನಿರೂಪಕಿ ಅನುಶ್ರೀ, ನಟಿ ಚಿತ್ಕಲಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here