ಇಂದು ನಟ ಕಿಚ್ಚ ಸುದೀಪ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಹುಟ್ಟುಹಬ್ಬಕ್ಕೂ ಮುನ್ನ ದಿನ ಸುದೀಪ್ ಪ್ರೇಸ್ ಮೀಟ್ ಕರೆದಿದ್ದು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಸುದೀಪ್ ತಮ್ಮ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ ಯಾರ್ಯಾರು ಬರ್ತಿರೋ ಎಲ್ಲಾ ಹುಷಾರಾಗಿ ಬನ್ನಿ ಎಂದು ಕಿವಿ ಮಾತು ಹೇಳಿದ್ದಾರೆ.
ಇನ್ನೂ ಪ್ರೆಸ್ ಮೀಟ್ ನಲ್ಲಿ ಸುದೀಪ್ ನಟ್ಟು ಬೋಲ್ಟ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಾಧು ಕೋಕಿಲಾ ಅವರು ಆಮೇಲೆ ಕೂತುಕೊಂಡು ಹೇಳ್ತಾರೆ. ಎಲ್ಲರನ್ನೂ ಕರೆದ್ರೆ (ಫಿಲ್ಮ್ ಫೆಸ್ಟಿವಲ್ಗೆ) ನಾನು ಹೆಂಗೆ ಮೆಂಟೇನ್ ಮಾಡಲಿ. ಯಾರಿಗೆ ಸೆಕ್ಯೂರಿಟಿ ಕೊಡಲಿ ಎಂದು. ಇದನ್ನು ಅವರಿಗೆ ನೀಟ್ ಆಗಿ ಹೇಳಬೇಕಿತ್ತು. ಅಲ್ಲಿ ಬಂದು ಡಿಕೆಶಿ ಹೇಳಿದಾಗಿ ಸೈಲೆಂಟ್ ಆಗಿ ನಿಂತುಕೊಂಡು ಇದ್ದರು.
ಈ ಕಿತಾಪತಿ ಸಾಧು ಅವರದ್ದು. ಬೇರೆ ಯಾರದ್ದೂ ಅಲ್ಲ. ಇಂಡಸ್ಟ್ರಿಯಲ್ಲಿ ಯಾರಿಗೆಲ್ಲ ಕರೆದಿದ್ದಾರೋ ಅವರೆಲ್ಲರೂ ಹೋಗಿದ್ದಾರೆ. ಕರೆದಿಲ್ಲ ಆದರೆ ಯಾರು ಹೋಗ್ತಾರೆ? ಕೆಲವರಿಗೆ ಬರೋಕೆ ಆಗಿಲ್ಲ. ಇನ್ನು ಕೆಲವರು ದೊಡ್ಡ ದೊಡ್ಡ ಲೈನ್ಗಳನ್ನು ಹೇಳಿದರು. ಪರವಾಗಿಲ್ಲ. ತಪ್ಪೇನು ಇಲ್ಲ. ಅದನ್ನು ತಿಳಿದುಕೊಳ್ಳಬೇಕು. ಪಾಪ ಸಾಧುದು ತಪ್ಪೇನೂ ಇಲ್ಲ. ಅವರು ಇರೋದೇ ಹಾಗೆ. ತಮಾಷೆ ಮಾಡಿಕೊಂಡು ಇರುತ್ತಾರೆ. ತಮಾಷೆ ಮಾಡಿಬಿಟ್ಟಿದ್ದಾರೆ, ಅದು ಸಿರೀಯಸ್ ಆಗಿದೆ ಎಂದು ಸುದೀಪ್ ಹೇಳಿದರು.



