ನಿರೂಪ್ ಭಂಡಾರಿ ಜೊತೆಯಾದ ಸಾಯಿಕುಮಾರ್.. ಮತ್ತೆ ಒಂದಾಯ್ತು ರಂಗಿತರಂಗ ಕಾಂಬೋ…

0
Spread the love

10 ವರ್ಷದ ನಂತರ ಮತ್ತೆ ಕೈ ಜೋಡಿಸಿದ ರಂಗಿತರಂಗ ಜೋಡಿ…

Advertisement

ಕನ್ನಡ ಚಿತ್ರರಂಗದಲ್ಲಿ ‘ರಂಗಿತರಂಗ’ ಚಿತ್ರ ಮಾಡಿದ ಸಾಧನೆ ದೊಡ್ಡದು. ಈ ಸಿನಿಮಾ ಬಿಡುಗಡೆಯಾಗಿ ಹೆಚ್ಚುಕಮ್ಮಿ 10 ವರ್ಷವಾಗಿದೆ. ಬಾಹುಬಲಿಯಂತಹ ದೊಡ್ಡ ಸಿನಿಮಾದ ಎದುರು ಗೆದ್ದು ಬೀಗಿದ್ದ ಈ ಸಿನಿಮಾದಲ್ಲಿ, ನಾಯಕನಾಗಿ ಅಮೋಘವಾಗಿ ನಟಿಸಿದ್ದ ನಿರೂಪ್ ಭಂಡಾರಿ ಎದುರು ಖಳನಾಯಕನಾಗಿ ಸಾಯಿಕುಮಾರ್ ಅತ್ಯದ್ಭುತ ಪ್ರದರ್ಶನ ತೋರಿಸಿದ್ದರು.  ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಅಬ್ಬರಿಸಿದ್ದ ಸಾಯಿಕುಮಾರ್ ಹಾಗೂ ನಿರೂಪ್ ಮತ್ತೆ ಕೈ ಜೋಡಿಸಿದ್ದಾರೆ.

ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸ್ತಿದ್ದಾರೆ. ಈಗಾಗ್ಲೇ ಸಾಯಿಕುಮಾರ್ ಚಿತ್ರತಂಡ ಸೇರಿದ್ದು ಬಹಳ ವರ್ಷಗಳ ನಂತ್ರ ಈ ಕಾಂಬೋ ಮತ್ತೆ ಒಂದಾಗಿರುವುದು ಕುತೂಹಲ ಹೆಚ್ಚಿಸಿದೆ.

ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಪರ್ಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳುತ್ತಿದೆ 

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ  ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು,  

ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ


Spread the love

LEAVE A REPLY

Please enter your comment!
Please enter your name here