ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗುರುವಾರ ಸ್ವತಂತ್ರ ಸೇನಾನಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಪಟ್ಟಣಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಯಣ್ಣನ ಮೂರ್ತಿಗೆ ಪುಷ್ಪ ಮಾಲೆ ಸಮರ್ಪಿಸಿ ನಮಿಸಿದರು.
ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣವಾಗಿ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎಂಬ ರಾಯಣ್ಣನ ಅಭಿಮಾನಿಗಳ ಬೇಡಿಕೆ ಆಸೆ ಈಡೇರಿದಂತಾಗಿದೆ ಎಂದು ಅಭಿಮಾನಿ ಬಳಗದವರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ವೇಳೆ ಮಾಜಿ ಶಾಸಕರುಗಳಾದ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಸಂಗೊಳ್ಳಿ ರಾಯಣ್ಣ ವೇದಿಕೆ ರಾಜ್ಯಾಧ್ಯಕ್ಷ ಸುರೇಶ ಗೋಕಾವಿ, ಎಂ.ಆರ್. ಪಾಟೀಲ, ಲೆಂಕೆಪ್ಪ ಶರಸೂರಿ, ಮಂಜುನಾಥ ಮಾಗಡಿ, ವಿಜಯಕುಮಾರ ಹತ್ತಿಕಾಳ, ಸುನೀಲ ಮಹಾಂತಶೆಟ್ಟರ, ವಿಜಯ ಕುಂಬಾರ, ಗಂಗಾಧರ ಮೆಣಸಿನಕಾಯಿ, ನವೀನ ಹಿರೇಮಠ, ಪ್ರವೀಣ ಬೋಮಲೆ, ಬಸವರಾಜ ಹಿರೇಮನಿ, ಸುರೇಶ ಹಟ್ಟಿ, ಭರಮಣ್ಣ ಶರಸೂರಿ, ಮಂಜು ಮುಳಗುಂದ, ವೆಂಕಪ್ಪ ಬಸಾಪೂರ, ಮೈಲಾರಿ ಹೆಗ್ಗಣ್ಣವರ, ಮಹಾಂತೇಶ ಗುಂಜಳ, ಶಿವು ಹೊಂಬಳ, ಸಂತೋಷ ಗದ್ದಿ, ಸಂತೋಷ ಬಾಲೇಹೊಸೂರು, ಆನಂದ ಗದ್ದಿ, ನಿಂಗಪ್ಪ ಕುರಹಟ್ಟಿ, ರಾಜು ಗದ್ದಿ, ಮಹೇಶ ಬಸಾಪೂರ, ಸುರೇಶ ಸೂರಣಗಿ, ಮಂಜುನಾಥ ಘಂಟಿ, ಭಾಗ್ಯಶ್ರೀ ಬಾಬಣ್ಣ ಸೇರಿ ಹಲವರಿದ್ದರು.