ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ನಗರದ ಜ.ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜರುಗಿದ ‘ಉತ್ಸವ-2025’ರಲ್ಲಿ ಸನ್ಮಾರ್ಗ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈದಿದ್ದಾರೆ.
ಚರ್ಚಾ ಸ್ಪರ್ಧೆಯಲ್ಲಿ ಸಂದೀಪ ಹಾಗೂ ತಂಡ ದ್ವಿತೀಯ ಸ್ಥಾನ, ಗೀತಗಾಯನ ಸ್ಪರ್ಧೆಯಲ್ಲಿ ಆದಿತ್ಯ ಜೆ ಪ್ರಥಮ, ಪಿಕ್ & ಸ್ಪೀಚ್‌ನಲ್ಲಿ ಜಸ್ಟಿನ್ ಪ್ರಥಮ, ಬಾಲಕಿಯರ ಬ್ಯಾಡ್‌ಮಿಂಟನ್‌ನಲ್ಲಿ ಜೀಬಾ ಹಾಗೂ ಕಲ್ಯಾಣಿ ಪ್ರಥಮ, ಸಂಗೀತವಾದ್ಯ ಸ್ಪರ್ಧೆಯಲ್ಲಿ ವಿರೇಶ ಬಿ ಪ್ರಥಮ, ಫ್ಯಾಶನ್ ಶೋದಲ್ಲಿ ಸುಮೀತ್ ಮತ್ತು ತಂಡ ದ್ವಿತೀಯ, ಮೆಹಂದಿ ಸ್ಪರ್ಧೆಯಲ್ಲಿ ಇಮಾನ್ ತೃತೀಯ, ಬಾಲಕರ ಬ್ಯಾಡ್‌ಮಿಂಟನ್‌ನಲ್ಲಿ ರಾಹುಲ್ ಮತ್ತು ಸುಮಿತ್ ದ್ವಿತೀಯ, ಬಾಲಕಿಯರ ಬ್ಯಾಡ್‌ಮಿಂಟನ್‌ನಲ್ಲಿ ಅವನಿ ಪ್ರಥಮ, ಗ್ರೀಟಿಂಗ್ ಕಾರ್ಡ್ ಮೇಕಿಂಗ್‌ನಲ್ಲಿ ಮಾನಸಾ ಎ.ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಸ್ಟುಡೆಂಟ್‌ಸ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ ಪ್ರೊ. ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಸಂಸ್ಥೆಯ ನಿರ್ದೇಶಕರಾದ ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ ಮತೀನ್ ಮುಲ್ಲಾ, ಪ್ರೊ. ರೋಹಿತ ಒಡೆಯರ್, ಪ್ರೊ. ಪುನೀತ ದೇಶಪಾಂಡೆ ಅಭಿನಂದಿಸಿದ್ದಾರೆ.



