ಸರೋಜಾದೇವಿ ಇನ್ನಿಲ್ಲ ಎನ್ನುವುದು ಕಲಾ‌ಕ್ಷೇತ್ರಕ್ಕೆ ಅತ್ಯಂತ ದುಃಖದ ದಿನ: ಸಂಸದ ಬೊಮ್ಮಾಯಿ

0
A pro-development budget by a developed India
Spread the love

ಬೆಂಗಳೂರು: ಅಭಿನಯ ಶಾರದೆ, ವಿಭಿನ್ನ ಪಾತ್ರವನ್ನ ಲೀಲಾಜಾಲವಾಗಿ ನಟಿಸುತ್ತಿದ್ದ ಸರೋಜಾದೇವಿ ಇನ್ನಿಲ್ಲ ಎನ್ನುವುದು ನಮ್ಮ ಕರ್ನಾಟಕದ ಕಲಾ‌ಕ್ಷೇತ್ರಕ್ಕೆ ಅತ್ಯಂತ ದುಃಖದ ದಿನ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ರಾಜಕುಮಾರ್ ಜೊತ, NTR, ದಿಲೀಪ್ ಕುಮಾರ್ ಜೊತೆ ನಟಿಸಿ ಅತ್ಯಂತ ಪ್ರಖ್ಯಾತ ನಟಿ ಆಗಿದ್ರು. ಕನ್ನಡದಲ್ಲಿ ಹೇಳಬೇಕಾದ್ರೆ ಕಿತ್ತೂರು ರಾಣಿ ಚೆನ್ನಮ್ಮರಾಗಿದ್ದರು. ಚೆನ್ನಮ್ಮ ಅಂದ್ರೆ ಹೀಗಿದ್ರು ಅಂತ ಕಲ್ಪನೆ ಮೂಡಿಸಿದ್ರು‌.

Advertisement

ಅಭಿನಯ ಸರಸ್ವತಿ, ಚತುರ್ಭಾಷಾ ತಾರೆ ಪೌರಾಣಿಕ ಹಾಗೂ ಸಾಮಾಜಿಕ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರವನ್ನು ಲೀಲಾಜಾಲವಾಗಿ ನಟಿಸುತ್ತಿದ್ದ ಸರೋಜಾದೇವಿ ಇನ್ನಿಲ್ಲ. ಒಂದು ಕಾಲದಲ್ಲಿ ಕನ್ನಡದ ಸೂಪರ್ ಸ್ಟಾರ್ ಆಗಿದ್ದ ಅವರು, ರಾಜಕುಮಾರ್ ಜೊತೆ, ತೆಲುಗಿನಲ್ಲಿ ಎನ್‌ಟಿಆರ್ ಜೊತೆ, ಹಿಂದಿಯಲ್ಲಿ ದಿಲೀಪ್ ಕುಮಾರ್ ಜೊತೆ ನಟಿಸಿ ಇಡೀ ದೇಶದಲ್ಲಿ ಪ್ರಖ್ಯಾತ ನಟಿ ಆಗಿದ್ದರು ಎಂದರು.

ಮಲ್ಲಮ್ಮನ ಪವಾಡ ಇದೊಂದು ಮನೆಮನೆಯಲ್ಲಿ ಮನಮುಟ್ಟುವ ಚಿತ್ರವಾಗಿತ್ತು. ಲಕ್ಷ್ಮಿ ಸರಸ್ವತಿ, ಬಬ್ರುವಾಹನ, ಶ್ರೀನಿವಾಸ ಕಲ್ಯಾಣ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅಭಿನಯದ ಜೊತೆ ಗಂಭೀರತೆಯಲ್ಲಿ ಅಗ್ರಮಾನ್ಯರಾಗಿದ್ದರು. ಐದು ದಶಕದಿಂದ ಚಿತ್ರರಂಗದಲ್ಲಿ ನಟಿಸಿದ್ದು, ನಮ್ಮನ್ನೆಲ್ಲಾ ಅಗಲಿದ್ದಾರೆ. ಆದರೂ ಅವರ ಅಭಿನಯದ ಮೂಲಕ ನಮ್ಮ ಮನದಲ್ಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here