ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಕೊಂಡಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಸ್ಯ ಶ್ಯಾಮಲಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಕಲ್ಮೇಶ್ವರ ದೊಡ್ಡಮನಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಎಂ.ಎಸ್. ಹಿರೇಮಠ ಮಾತನಾಡಿ, ಮರಗಳಿಂದ ಆಗುವ ಉಪಯೋಗಗಳನ್ನು ತಿಳಿಸಿ, ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ನಾವೆಲ್ಲರೂ ಕೈ ಜೋಡಿಸೋಣ, ಮನೆಗೊಂದು ಮರ-ಊರಿಗೊಂದು ವನ ಇದರಿಂದ ನಾವೆಲ್ಲರೂ ಸುಭಿಕ್ಷರಾಗಿ ಬಾಳಬಹುದು ಎಂದರು.
ಕಾರ್ಯಕ್ರಮದಲ್ಲಿ ದೇವಪ್ಪ ಲಮಾಣಿ, ಮಂಜು ರಾಠೋಡ, ಸಿದ್ಧು ಯಂಗಾಡಿ, ಶಿವರಾಜ್ ಲಮಾಣಿ, ರಮೇಶ ದೊಡ್ಡಮನಿ, ಅಕ್ಕಮ್ಮ ನೀರಲಗಿ, ಷಣ್ಮುಖ ಹುಬ್ಬಳ್ಳಿ, ರತ್ನಾ ದೊಡ್ಡಮನಿ, ಹಿರಿಯರಾದ ರಾಮಣ್ಣ ಬಾಣದ, ಬಸು ಲಮಾಣಿ, ನಾಗರಾಜ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು. ಸಹ ಶಿಕ್ಷಕ ಎನ್.ಎಸ್. ಸಜ್ಜನರ ನಿರೂಪಿಸಿದರು.



