ಯಾದಗಿರಿ: ಏನೋ ಪ್ಲಾನ್ ಇಟ್ಟುಕೊಂಡೆ ಸತೀಶ್ ಅವರು ಕುಮಾರಣ್ಣನ ಭೇಟಿಯಾಗಿದ್ದಾರೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದ್ದಾರೆ. ಯಾದಗಿರಿಯ ಕೊಡೇಕಲ್ ನಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ರೆ 100% ಸಿಎಂ ಆಗುತ್ತಾರೆ.
ಜಾರಕಿಹೊಳಿ ಅವರು ಸುಮ್ಮಸುಮ್ಮನೆ ಯಾರನ್ನೂ ಭೇಟಿ ಆಗಲ್ಲ. ಸುಮ್ಮನೆ ಕುಮಾರಣ್ಣನ ಭೇಟಿ ಮಾಡುವ ಪ್ರಶ್ನೆಯಿಲ್ಲ. ಏನೋ ಫ್ಲಾನ್ ಇಟ್ಟುಕೊಂಡೆ ಕುಮಾರಣ್ಣನ ಭೇಟಿಯಾಗಿದ್ದಾರೆ ಎಂದ್ರು. ಇನ್ನೂ ರಾಜಣ್ಣ ಯಾವತ್ತು ಸಿಎಂ ಸಿದ್ದರಾಮಯ್ಯ ಪರ ಇರ್ತಾರೆ.
ಅದಕ್ಕಾಗಿ ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷದವರೇ ಹನಿಟ್ರ್ಯಾಪ್ ಮಾಡ್ತಿದ್ದಾರೆ. ಪಾಪ ರಾಜಣ್ಣವ್ರಿಗೆ ಗೊತ್ತು ಆದರೆ ಓಪನ್ ಹೇಳಲು ಆಗ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಕ್ಯಾಂಡಿಡೇಟ್ ಅಂತ ಯಾರ ಹೆಸರು ಬರುತ್ತೋ, ಯಾರು ಸಿಎಂ ಸಿದ್ದರಾಮಯ್ಯ ಪರ ಇರ್ತಾರೋ ಅವ್ರಿಗೆ ಟ್ರ್ಯಾಪ್ ಆಗುತ್ತರೆ. ಮುಂದೆ ಸಚಿವರಾದ ಪರಮೇಶ್ವರ, ಸತೀಶ ಜಾರಕಿಹೊಳಿಗೂ ಟ್ರ್ಯಾಪ್ ಆಗುತ್ತದೆ ಎಂದರು.