HomeBengaluru Newsಇಂಧನ ಉಳಿಸುವುದು ದೇಶದ ಹಿತಕ್ಕೆ ಅಗತ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

ಇಂಧನ ಉಳಿಸುವುದು ದೇಶದ ಹಿತಕ್ಕೆ ಅಗತ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

For Dai;y Updates Join Our whatsapp Group

Spread the love

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಸೇರಿದಂತೆ ವಿವಿಧ ಸಂಪನ್ಮೂಲಗಳನ್ನು ಮಿತವಾಗಿ ಬಳಸುವಂತೆ ನೀಡಿರುವ ಮನವಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಜಾಗೃತಿಯ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಯೋಗಾಭ್ಯಾಸಕ್ಕೆ ಒತ್ತಾಯಿಸಿದ ಉದಾಹರಣೆಯನ್ನೂ ಅವರು ಉಲ್ಲೇಖಿಸಿದರು.

ಭಾರತವು ತೈಲ ಹಾಗೂ ಖಾದ್ಯ ತೈಲದಲ್ಲಿ ಸಂಪೂರ್ಣ ಆತ್ಮನಿರ್ಭರವಾಗಿಲ್ಲ ಎಂಬುದನ್ನು ವಿವರಿಸಿದ ಶೋಭಾ ಕರಂದ್ಲಾಜೆ, ದೇಶದಲ್ಲಿ ಸುಮಾರು 70% ಖಾದ್ಯ ತೈಲವನ್ನು ಇಂಡೋನೇಷ್ಯಾ ಮತ್ತು ಮಲೇಷ್ಯಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಪಾಮ್ ಆಯಿಲ್ ಸೇರಿದಂತೆ ತೈಲ ಉತ್ಪನ್ನಗಳ ಬಳಕೆಯಿಂದ ವಿದೇಶಿ ವಿನಿಮಯದ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳು ವಾಹನ ಹಾಗೂ ರಸಗೊಬ್ಬರ ಕ್ಷೇತ್ರಗಳಿಗೆ ಪ್ರಮುಖವಾಗಿದ್ದು, ಅವುಗಳ ಬಳಕೆಯನ್ನು ಜವಾಬ್ದಾರಿಯಿಂದ ಕಡಿಮೆ ಮಾಡಿದರೆ ವಿದೇಶಿ ವಿನಿಮಯ ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಚಿನ್ನದ ಬೆಲೆ ಏರಿಕೆ, ಜಾಗತಿಕ ಯುದ್ಧ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಅಸ್ಥಿರತೆಗಳನ್ನೂ ಉಲ್ಲೇಖಿಸಿದ ಅವರು, ಇಂತಹ ಸಂದರ್ಭದಲ್ಲಿ ದೇಶದ ಆದ್ಯತೆಗಳಿಗೆ ತಕ್ಕಂತೆ ಸಂಪನ್ಮೂಲಗಳನ್ನು ಬಳಕೆ ಮಾಡುವುದು ಅಗತ್ಯ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಹಿತವಾಗಿ ಮತ್ತು ಮಿತವಾಗಿ ಬಳಕೆಗೆ ನೀಡಿರುವ ಕರೆ ಸರಿಯಾಗಿದೆ ಎಂದು ಶೋಭಾ ಕರಂದ್ಲಾಜೆ ಸಮರ್ಥನೆ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!