ವಿಜಯಸಾಕ್ಷಿ ಸುದ್ದಿ, ಡಂಬಳ : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ-ಪುಸ್ತಕ, ಸಮವಸ್ತ್ರ, ಊಟ, ಹಾಲು ಸೇರಿದಂತೆ ಹಲವಾರು ಬಗೆಯ ಸೌಲಭ್ಯಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮುಂದಾಗಿ ಎಂದು ಎಸ್‌ಡಿಎಮ್‌ಸಿ ಅಧ್ಯಕ್ಷ ಗೌಸಿದ್ದಪ್ಪ ಹಾದಿಮನಿ ಹೇಳಿದರು.
ಡಂಬಳ ಗ್ರಾಮದ ಸರ್ಕಾರಿ ಡಿಪಿಇಪಿ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಮೃತ್ಯುಂಜಯ ಪೂಜಾರ, ಮುಖ್ಯೋಪಾಧ್ಯಾಯರಾದ ಎಸ್.ಜಿ. ಪಾಟೀಲ, ಎಸ್‌ಡಿಎಮ್‌ಸಿ ಸದಸ್ಯರಾದ ಖಾದರ್ ಬಳ್ಳಾರಿ, ಮಲ್ಲಪ್ಪ ಒಂಟೆಲಭೋವಿ, ಗಂಗಾಧರ ಮೇವುಂಡಿ, ಶಿಕ್ಷಕ ವೃಂದದ ಜಿ.ಬಿ. ವಾಲಿ, ಆಯ್.ಬಿ. ಅಂಗಡಿ, ವ್ಹಿ.ಆರ್. ಅಥಣಿ, ಜೆ.ಎಸ್. ಮಣೇಗಾರ, ಪಿ.ಕೆ. ಲಮಾಣಿ, ಆರ್.ಎ. ಅಕ್ಕಿ, ಪಿ.ಎಮ್. ಗುಡದೂರ, ಎಸ್.ಡಿ. ಲಮಾಣಿ, ಸಿ.ಜಿ. ವಾಲ್ಮೀಕಿ ಇದ್ದರು.