HomeDharwadಸೂಕ್ತ ದಾಖಲೆಯಿಲ್ಲದ ಬಂಗಾರದ ಆಭರಣ ಸೀಜ್

ಸೂಕ್ತ ದಾಖಲೆಯಿಲ್ಲದ ಬಂಗಾರದ ಆಭರಣ ಸೀಜ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ತೇಗೂರ ಚೆಕ್ ಪೋಸ್ಟ್ದಲ್ಲಿ ಗುರುವಾರ ರಾತ್ರಿ ತಪಾಸಣೆಯಲ್ಲಿ ಕೆ.ಎಸ್.ಆರ್.ಟಿ.ಸಿಯ ನಿಪ್ಪಾಣಿ –ಗಂಗಾವತಿ ಬಸ್‌ದಲ್ಲಿ ಸರಿಯಾದ ದಾಖಲೆ ಇಲ್ಲದ ರೂ. 38,50,000 ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿದ್ದು, ವಸ್ತು ವಶ ಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಮಾರ್ಚ್ 21ರಂದು ರಾತ್ರಿ 11-35 ಗಂಟೆಗೆ ತೆಗೂರ ಚೆಕ್ ಪೋಸ್ಟ್ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-37-ಎಫ್-0748 (ನಿಪ್ಪಾಣಿ-ಗಂಗಾವತಿ) ನೇದ್ದರಲ್ಲಿ ಆರೋಪಿ ಮಹಾರಾಷ್ಟç ಕೊಲ್ಲಾಪುರದ ಪ್ರಕಾಶಕುಮಾರ (47) ಹುಕುಮಜಿ ಮಾಲಿ ಇವರು ಒಟ್ಟು 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೆಟ್ ಇರುವ 38,50,000 ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಕೊಲ್ಲಾಪುರದಿಂದ ಸಿಂಧನೂರ ಕಡೆಗೆ ಹೋಗುತ್ತಿದ್ದು, ಸದರಿಯವರು ತೋರಿಸಿದ ಬಿಲ್‌ಗಳಲ್ಲಿ ಇರುವ ಬಂಗಾರದ ಆಭರಣಗಳ ತೂಕಕ್ಕೂ ಹಾಗೂ ತಪಾಸಣೆಯಲ್ಲಿ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಇದ್ದು, ಸರಿಯಾದ ಮಾಹಿತಿಯನ್ನು ಬಿಲ್ಲುಗಳಲ್ಲಿ ನಮೂದಿಸದೇ ಮರೆಮಾಚಿ ಯಾವುದೋ ಅಪರಾಧ ಕೃತ್ಯ ಎಸಗುವ ಸಲುವಾಗಿ ತೆಗೆದುಕೊಂಡು ಹೊರಟಿರುವ ಸಂಶಯದ ಮೇಲೆ ಕಲಂ 98 ಕೆ.ಪಿ ಕಾಯ್ದೆ ಅಡಿಯಲ್ಲಿ ಗರಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img