ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸೌಜನ್ಯ ಬಿ.ಪಾಟೀಲ ಜವಾಹರ ನವೋದಯ ಶಾಲೆಗೆ ಆಯ್ಕೆಯಾಗಿದ್ದಾಳೆ.
Advertisement
ಕಳೆದ ವರ್ಷ ಜರುಗಿದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಸೌಜನ್ಯ ಉತೀರ್ಣಳಾಗಿದ್ದು, ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಜವಾಹರ ನವೋದಯ ಶಾಲೆಗೆ 6ನೇ ತರಗತಿಗೆ ಪ್ರವೇಶ ಪಡೆದಿದ್ದಾಳೆ.
ಶಾಲೆಯ ಪ್ರಧಾನ ಗುರುಮಾತೆ ಆರ್.ಬಿ. ಬರದ್ವಾಡ, ಹಿರಿಯ ಶಿಕ್ಷಕ ಬಿ.ಐ. ಗರ್ಜಪ್ಪನವರ, ರಫಿಯಾ ದಂಡಿನ, ಸಂಗೀತಾ ತಡಹಾಳ, ಎಫ್.ಬಿ. ಬರದ್ವಾಡ, ಎ.ಎಂ. ದಂಡಿನ, ಆರ್.ಎಸ್. ಪಾಟೀಲ, ಪಿ.ಕೆ.ಪಿ.ಎಸ್ ನಂ.1ರ ವ್ಯವಸ್ಥಾಪಕ ಶರಣಪ್ಪ ಗರ್ಜಪ್ಪನವರ ಹಾಗೂ ಅಧ್ಯಕ್ಷರು, ನಿರ್ದೇಶಕರು, ಪಾಲಕರು, ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.