ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯ ವಿದ್ಯಾರ್ಥಿ ಮಂಜುನಾಥ್ ಹಳೇರಿತ್ತಿ ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸರಪಳಿ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಇದೇ ತಿಂಗಳು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ 65ನೇ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಸ್ ಮೀಟ್‌ನಲ್ಲಿ ಮಂಜುನಾಥ್ ಹಳೇರಿತ್ತಿ ಭಾಗವಹಿಸಲಿದ್ದಾನೆ.
ಸಾಧಕ ವಿದ್ಯಾರ್ಥಿ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕ ಕೆ.ಆರ್. ಲಮಾಣಿ ಅವರಿಗೆ ಸಂಸ್ಥೆಯ ಚೇರ್‌ಮನ್ ಎಸ್.ಪಿ. ಬಳಿಗಾರ, ಸಂಸ್ಥೆಯ ಅಧ್ಯಕ್ಷ ಎಫ್.ಡಿ. ಹುನಗುಂದ, ಸೋಮಣ್ಣ ಡಾಣಗಲ್, ವೀರಣ್ಣ ಪವಾಡದ, ಚಂದ್ರಣ್ಣ ತೋಟದ, ಈರಣ್ಣ ಅಕ್ಕೂರ, ಭರತ್ ಬಳಿಗಾರ, ಶ್ರೀ ಅಳಳ್ಳಿ, ಮುಖ್ಯೋಪಾಧ್ಯಾಯ ಸಿ.ಬಿ. ಮೊಗಲಿ, ಬಿ.ಬಿ. ಚಿಟಗಿ, ಎಲ್.ಪಿ. ಲಮಾಣಿ, ಆರ್.ಎಂ. ಜಂಬೇರಾಳ, ವೈ.ಬಿ. ಬಸಾಪುರ, ಬಿ.ಎಸ್. ಹೆಬ್ಬಾಳ, ಮಹಾಂತೇಶ ಅಳಳ್ಳಿ, ಬಸವರಾಜ್ ಡಂಬ್ರಳ್ಳಿ ಸೇರಿದಂತೆ ಶಿಕ್ಷಕರು, ನಿರ್ದೇಶಕರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.



