ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಡೇಪಾಳ್ಯ ಪೊಲೀಸ್ರಿಂದ ಮೂವರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಅಜೀವುಲ್ಲಾ, ನಜೀವುಲ್ಲಾ, ರಿಷಬ್ ಚಕ್ರವರ್ತಿ ಬಂಧಿತ ಆರೋಪಿಗಲಾಗಿದ್ದು, ತಮಿಳುನಾಡು ಮೂಲದ ನಜೀವುಲ್ಲಾ ಹಾಗೂ ಅಜೀವುಲ್ಲಾ, ಬಸ್ ನಲ್ಲಿ ನಗರಕ್ಕೆ ಬಂದು ಬೈಕ್ ಕದ್ದು ಎಸ್ಕೇಪ್ ಆಗ್ತಿದ್ರು..
ಮತೊಬ್ಬ ರಿಷಭ್ ಚಕ್ರವರ್ತಿ ಪಶ್ಚಿಮ ಬಂಗಾಳ ಮೂಲದವ. ಬಿ.ಟೆಕ್ ಪದವೀಧರ. ಈ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಈತ ಜಾಮೀನು ಪಡೆದು ಹೊರಬಂದಿದ್ದ. ಬಳಿಕ ಪೊಲೀಸರೇ ಈತನಿಗೆ ಬುದ್ದಿವಾದ ಹೇಳಿ ಒಂದು ಕೆಲಸವನ್ನೂ ಕೊಡಿಸಿದ್ದರು.
ಆದರೆ ಕೇವಲ ಒಂದೇ ತಿಂಗಳ ಅಂತರದಲ್ಲಿ ಆತ ಕೆಲಸದ ಬದಲು ಮತ್ತೆ ದ್ವಿಚಕ್ರ ವಾಹನ ಕಳ್ಳತನಕ್ಕಿಳಿದಿದ್ದ. ವಿಚಿತ್ರವೆಂದರೆ ಕದ್ದ ದ್ವಿಚಕ್ರವಾಹನವನ್ನ ಓಡಿಸುತ್ತಿದ್ದ ರಿಷಭ್ ಚಕ್ರವರ್ತಿ, ಅದರ ಇಂಧನ ಖಾಲಿಯಾದಾಗ ಎಲ್ಲೆಂದರಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದ. ಸದ್ಯ ಆರೋಪಿಗಳಿಂದ 20 ಲಕ್ಷ ರೂ ಮೌಲ್ಯದ ಒಟ್ಟು 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.



