ಹಸಿ-ಒಣ ಕಸಗಳನ್ನು ಬೇರ್ಪಡಿಸಿ ಹಾಕಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದಲ್ಲಿ ಎಲ್ಲಡೆ ಕಸ ಸಂಗ್ರಹವಾಗುತ್ತಿದ್ದು, ಅದನ್ನು ಸರಿಯಾಗಿ ವಿಲೇವಾರಿ ಮಾಡುವದು ಪುರಸಭೆ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಜನನಿಬಿಡ ರಸ್ತೆಗಳ ಬದಿಗಳಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಹಾಕುವ ಸ್ಟೀಲ್ ಡಸ್ಟ್ಬಿನ್‌ಗಳನ್ನು ಹಾಕಲಾಗುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.

Advertisement

ಅವರು ಪುರಸಭೆ ಎದುರು ಹಸಿ ಕಸ-ಒಣ ಕಸ ಬೇರ್ಪಡಿಸುವ ಸ್ಟೀಲ್ ಡಸ್ಟ್ಬಿನ್‌ಗಳನ್ನು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಉದ್ಘಾಟಿಸಿದ ಸಂದರ್ಭದಲ್ಲಿ ಮಾತನಾಡಿದರು.

ಜನರು ಕಸವನ್ನು ರಸ್ತೆ, ಗಟಾರನಲ್ಲಿ ಚೆಲ್ಲದೆ ಕಸದ ಡಸ್ಟ್ಬಿನ್‌ಗಳಲ್ಲಿಯೇ ಹಾಕಬೇಕು. ಅಂದಾಜು 6 ಲಕ್ಷ್ ರೂ ವೆಚ್ಚದಲ್ಲಿ 62 ಸ್ಟೀಲ್ ಡಸ್ಟ್ಬಿನ್‌ಗಳನ್ನು ಸಾರ್ವಜನಿಕರು ಹೆಚ್ಚು ಅಡ್ಡಾಡುವ ಸ್ಥಳದಲ್ಲಿ, ದೇವಸ್ಥಾನ, ಮುಖ್ಯ ಬಜಾರ್ ರಸ್ತೆ, ಸರ್ಕಾರಿ ಆಸ್ಪತ್ರೆ, ಬಸ್‌ಸ್ಟ್ಯಾಂಡ್ ಇತ್ಯಾದಿ ಜಾಗದಲ್ಲಿ ಇವುಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಕಸವನ್ನು ಬೇರ್ಪಡಿಸಿ ಹಾಕಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪುರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ಇದ್ದು, ಈ ಕುರಿತಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಚನ್ನಪ್ಪ ಕೋಲಕಾರ, ಪುರಸಭೆ ಸದಸ್ಯರುಗಳಾದ ರಾಜೀವ ಕುಂಬಿ, ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ವಿಜಯ ಕರಡಿ, ರಮೇಶ ಗಡದವರ, ಕಿರಣ ನವಲೆ, ನೀಲಪ್ಪ ಪೂಜಾರ, ಪ್ರಕಾಶ ಕೊಂಚಿಗೇರಿಮಠ, ಸಿದ್ದು ದುರಗಣ್ಣವರ, ಪುರಸಭೆ ಸಿಬ್ಬಂದಿಗಳಾದ ನೇತ್ರಾ ಹೊಸಮನಿ, ಬಸವೆಣೆಪ್ಪ ನಂದೆಣ್ಣವರ, ಉಮಾ ಬೆಳವಿಗಿ, ಸಿದ್ದಪ್ಪ ಬಾಲೆಹೊಸೂರ, ಸಿದ್ದು ಹಿರೇಮಠ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here