ವಿಜಯಸಾಕ್ಷಿ ಸುದ್ದಿ, ಗದಗ: ಭಾರತದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ನಡೆಸಲು 2006ರಲ್ಲಿ ಅಂದಿನ ಕೇಂದ್ರ ಸರ್ಕಾರ ಡಾ. ರಾಜೇಂದ್ರ ಸಚಾರ ಕಮಿಟಿ ನಡೆಸಿರುವ ಸಮೀಕ್ಷೆಯಂತೆ ಗದಗ ಜಿಲ್ಲೆ ಮತ್ತು ಗದಗ-ಬೆಟಗೇರಿ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶೇ. 15ರಷ್ಟು ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯಿಂದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.
ಮುಸ್ಲಿಂ ಸಮುದಾಯವು ಅತ್ಯಂತ ಶೋಚನೀಯವಾಗಿ ಬದುಕು ನಡೆಸುತ್ತಿರುವುದನ್ನು ಸಚಾರ ಕಮಿಟಿ ವರದಿಯ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ವರದಿಯಂತೆ ಪ್ರತ್ಯೇಕ ಅನುದಾನಕ್ಕಾಗಿ ಈ ಹಿಂದೆ ಗದಗ-ಬೆಟಗೇರಿಯ ಮುಸ್ಲಿಂ ಸಮುದಾಯದ ಸಂಘಟನೆಗಲ್ಿಂದ ನಿರಂತರ ಹೋರಾಟಗಳನ್ನು ನಡೆಸಿ ಅಂದಿನ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅಂದು ನಡೆಸಿದ ನಿರಂತರ ಹೋರಾಟಗಳ ಪರಿಣಾಮ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿಯನ್ನು ಪ್ರತಿ ಜಿಲ್ಲೆಯಲ್ಲಿ ರಚನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆ ಮುಖಂಡರಾದ ಮಹ್ಮದಯುಸುಫ ನಮಾಜಿ, ಬಾಬಾಜಾನ ಬಳಗಾನೂರ, ಇಮ್ತಿಯಾಜ ಆರ್.ಮಾನ್ವಿ, ಅನ್ವರ ಶಿರಹಟ್ಟಿ, ಉಮರಫಾರುಖ ಹುಬ್ಬಳ್ಳಿ, ಮೆಹಬೂಬ ಮುಲ್ಲಾ, ರಫೀಕ ಜಮಾಲಖಾನವರ, ಜೀವನಸಾಬ ಉಮಚಗಿ, ಮಕ್ತುಮ ಮುಲ್ಲಾ, ನಿಜಾಮುದ್ದಿನ ಕಾತರಕಿ, ನಿಸಾರಖಾನ, ರಿಯಾಜ ಪಾಮಡಿ, ಖಾಜಾಸಾಬ ಇಸ್ಮಾಯಲನವರ, ರಜಾಕ ಸೂಡಿ ಮುಂತಾದವರು ಉಪಸ್ಥಿತರಿದ್ದರು.
ಸಮಿತಿಯು ಕೇವಲ ಕಾಟಾಚಾರದ ಸಭೆ ಮತ್ತು ಕಾರ್ಯಕ್ರಮಗಳು ನಡೆಸುತ್ತಿರುವುದು ಖಂಡನೀಯ. ಇಲಾಖೆಯಿಂದ ನಡೆಸಲಾಗುತ್ತಿರುವ ಹಾಸ್ಟೇಲ್‌ಗಳಲ್ಲಿ ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಇಲಾಖೆಯಿಂದ ನಡೆಸಲಾಗುತ್ತಿರುವ ಮಾಹಿತಿ ಕೇಂದ್ರದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಮಾಹಿತಿ ಕಾರ್ಯಕ್ರಮಗಳು ನಡೆಸಬೇಕು ಎಂದು ಒತ್ತಾಯಿಸಿದರು.