ಶಿವಮೊಗ್ಗ: ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇದಿಯಾ ಇಲ್ವಾ ಅನ್ನೋ ಪ್ರಶ್ನೆ ಮೂಡುತ್ತಿದೆ. ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕನಿಂದಲೇ ಮಕ್ಕಳಿಗೆ ಲೈಗಿಂಕ ದೌರ್ಜನ್ಯ ಆದ್ರೆ ಹೇಗೆ ಇರುತ್ತೇ ಹೇಳಿ.. ಇದೇ ಘಟನೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿದೆ. ವಸತಿ ಶಾಲೆಯ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲೆಯ ಸಂಗೀತ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ.
ವಸತಿ ಶಾಲೆಯ ಐವರು ವಿದ್ಯಾರ್ಥಿನಿಯರು 45 ವರ್ಷದ ಸಂಗೀತ ಶಿಕ್ಷಕನ ವಿರುದ್ಧ ಶಾಲೆ ಮುಖ್ಯಶಿಕ್ಷಕರಿಗೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರು ನೀಡಿದ್ದರು.
ಸಂಗೀತ ಶಿಕ್ಷಕರು ಶಾಲೆಯಲ್ಲಿ ಇರುವಾಗ ಹಾಗೂ ಇತ್ತೀಚೆಗೆ ಪ್ರವಾಸಕ್ಕೆಂದು ಹೋದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ವಿದ್ಯಾರ್ಥಿನಿಯರು ತಿಳಿಸಿದ್ದರೆಂದು ಮುಖ್ಯಶಿಕ್ಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿ ಸಂಗೀತ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ.