ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಮುಕರ ಹಾವಳಿ ಹೆಚ್ಚಾಗಿದೆ. ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಘಟನೆ ಬೆಳಕಿಗೆ ಬಂದಿದೆ.
Advertisement
ನವಂಬರ್ 6 ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೈಡ್ ಉದ್ದಕ್ಕೂ ಯುವತಿಯ ಕಾಲು, ತೊಡೆ ಸವರಿ ದುರ್ವರ್ತನೆ ತೋರಿದ್ದಾನೆ. ಯುವತಿ ಕಾಲಿನ ಮೇಲೆ ಚಾಲಕ ಕೈ ಇಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
View this post on Instagram
ಘಟನೆಯ ವಿಡಿಯೋ ಮಾಡಿ ಯುವತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. KA55 EA4344 ಬೈಕ್ ರೈಡ್ ಮಾಡುತ್ತಿದ್ದ ಚಾಲಕ ಲೋಕೇಶ್ ದುರ್ವರ್ತನೆ ತೋರಿದ್ದಲ್ಲದೇ, ಪ್ರಶ್ನಿಸಿದ್ರೂ ಮತ್ತೆ ಯುವತಿಯ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ.
ಸ್ಥಳಕ್ಕೆ ತಲುಪಿದ ಬಳಿಕ ಯುವತಿಯ ಸ್ನೇಹಿತ ಚಾಲಕನನ್ನ ತರಾಟೆ ತೆಗೆದುಕೊಂಡಿದ್ದು, ಚಾಲಕ ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾನೆ. ಬೈಕ್ ಟ್ಯಾಕ್ಸಿ ಚಾಲಕನ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.


