Homecultureಶಂಕರಾಚಾರ್ಯರ ಜೀವನವೇ ಒಂದು ವೇದಾಂತ : ಬಾಲಚಂದ್ರಭಟ್

ಶಂಕರಾಚಾರ್ಯರ ಜೀವನವೇ ಒಂದು ವೇದಾಂತ : ಬಾಲಚಂದ್ರಭಟ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸನಾತನ ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ ಧರ್ಮ ಸಂಸ್ಥಾಪನೆ ಮಾಡಿದವರು ಶ್ರೀ ಶಂಕರ ಭಗವತ್ಪಾದರು. ಇಂದು ಸನಾತನ ಧರ್ಮ ಉಚ್ರಾಯ ಸ್ಥಿತಿಯಲ್ಲಿದೆಯೆಂದರೆ ಶಂಕರಾಚಾರ್ಯರೂ ಸೇರಿದಂತೆ ಆಚಾರ್ಯತ್ರಯರ ಕೊಡುಗೆ ಅಪಾರವಾಗಿದೆ ಎಂದು ವೇ.ಮೂ ಬಾಲಚಂದ್ರಭಟ್ ಹುಲಮನಿ ಹೇಳಿದರು.

ಅವರು ಪಟ್ಟಣದ ಶ್ರೀ ಶಂಕರಭಾರತಿಮಠ ಸಮುಧಾಯಭವನದಲ್ಲಿ ಗುರುವಾರ ಬ್ರಹ್ಮವೃಂದದ ವತಿಯಿಂದ ಏರ್ಪಡಿಸಲಾಗಿದ್ದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲ್ಪಾಯುಷ್ಯದ ಬದುಕಿನಲ್ಲಿ ಅಗಾಧವನ್ನು ಸಾಧಿಸಿದ ಮಹಾನ್‌ಪುರುಷರು ಶಂಕರಾಚಾರ್ಯರು. ಚಿಕ್ಕ ವಯಸ್ಸಿನಲ್ಲಿಯೇ ಭಗವದ್ಗೀತೆ, ಉಪನಿಷತ್ತು ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚಿಸಿದ್ದಾರೆ. ಶ್ರೀ ಶಂಕರಾಚಾರ್ಯರ ಜೀವನವೇ ಒಂದು ವೇದಾಂತ. ತಮ್ಮ ಜೀವನದ ಅಲ್ಪ ಅವಧಿಯಲ್ಲಿ, ಸಮಗ್ರ ಭಾರತವನ್ನು ಮೂರು ಬಾರಿ ಕಾಲ್ನಡಿಗೆಯಿಂದ ಸಂಚರಿಸಿ, ಅಖಂಡ ಭಾರತದ ನಾಲ್ಕೂ ದಿಕ್ಕುಗಳಲ್ಲಿ, ನಾಲ್ಕು ಪೀಠಗಳನ್ನು ಸ್ಥಾಪಿಸಿ ವೇದಗಳನ್ನು ಸಂರಕ್ಷಿಸುವ ಸಾಕ್ಷಿ ಪ್ರಜ್ಞೆಯ ಕಾರ್ಯ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ಭಾರತ ದೇಶದಲ್ಲಿ ಹಿಂದೂ ಧರ್ಮ ಉಳಿದು ಬೆಳೆಯಲು ಶಂಕರಾಚಾರ್ಯರು ಮೂಲ ಕಾರಣೀಕರ್ತರಾಗಿದ್ದಾರೆ. ಅವರನ್ನು ಸ್ಮರಿಸುವದು ಇಂದಿನ ದಿನಮಾನಗಳಲ್ಲಿ ಅವಶ್ಯವಾಗಿದೆ. ಬ್ರಾಹ್ಮಣ ಸಮಾಜದಿಂದ ಪ್ರತಿವರ್ಷ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ, ಸಮಾಜ ಸಂಘಟನೆ ಜೊತೆಗೆ ಧರ್ಮ ಸಂಘಟನೆ ಕಾರ್ಯವನ್ನು ಮಾಡಲಾಗುತ್ತಿದ್ದು, ಅನೇಕ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಹ ಸಮಾಜದಿಂದ ಮಾಡಲಾಗುತ್ತಿದೆ. ಇಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಇತರೆ ಎಲ್ಲ ಸಮಾಜ ಬಾಂಧವರೊಂದಿಗೆ ಸೇರಿ ಮಾಡುತ್ತಿರುವದು ವಿಶೇಷವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ವಹಿಸಿದ್ದರು. ಅತಿಥಿಗಳಾಗಿ ವಿ.ಎಲ್. ಪೂಜಾರ, ಕೆ.ಎಸ್. ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಗುರುಣ್ಣ ಪಾಟೀಲಕುಲಕರ್ಣಿ, ಪಿ.ಆರ್. ಕುಲಕರ್ಣಿ, ಆರ್.ಎಚ್. ಕುಲಕರ್ಣಿ, ದೃವರಾಜ ಬೆಟಗೇರಿ, ಡಿ.ಎಂ. ಪೂಜಾರ, ಅನೂಜಾ ಪೂಜಾರ, ವೀಣಾ ಪಡ್ನೀಸ್, ಮೀನಾಕ್ಷಿ ಸರ್‌ದೇಶಪಾಂಡೆ, ಗಾಯತ್ರಿ ಕುಲಕರ್ಣಿ, ಮಂಜುಳಾ ಸದಾವರ್ತಿ, ಮಂಜುನಾಥ ಸದಾವರ್ತಿ, ರಾಧಾ ಕುಲಕರ್ಣಿ, ಮೇಘನಾ ಸಾಹುಕಾರ ಸೇರಿದಂತೆ ಅನೇಕರಿದ್ದರು.

ಡಾ. ಪ್ರಸನ್ನ ಕುಲಕರ್ಣಿ, ಅರವಿಂದ ದೇಶಪಾಂಡೆ, ಕೃಷ್ಣಕುಮಾರ ಕುಲಕರ್ಣಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿಪ್ರ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಅನಿಲ ಬೆಟಗೇರಿ ಅವರಿಂದ ಸಂಗೀತ ಸೇವೆ ಜರುಗಿತು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ, ಕೃಪಾ ಕುಲಕರ್ಣಿ ತಬಲಾ ಸಾಥ್, ನಾರಾಯಣ ಮಾಯಾಚಾರ್ಯ ಹಾರ್ಮೋನಿಯಂ ಸಾಥ ನೀಡಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ, ಸಮಾಜಕ್ಕೆ ಸದಾ ಸೇವೆ ನೀಡುವವರನ್ನು ಹಾಗೂ ಬ್ರಹ್ಮವೃಂದದಿಂದ ಪ್ರತಿವರ್ಷ ಕೊಡಮಾಡುವ `ವಿಪ್ರ ಕಲಾಶ್ರೀ’ ಪ್ರಶಸ್ತಿಯನ್ನು ಈ ಬಾರಿ ಹುಬ್ಬಳ್ಳಿಯ ಹಿರಿಯ ಸಂಗೀತ ಕಲಾವಿದ ಅನಿಲ ಬೆಟಗೇರಿಯವರಿಗೆ ನೀಡಿ ಗೌರವಿಸಲು ಹೆಮ್ಮೆ ಎನಿಸುತ್ತದೆ ಎಂದರಲ್ಲದೆ, ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೃಷ್ಣ ಕುಲಕರ್ಣಿ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!