`ಶರಣರ ಶಕ್ತಿ’ ಚಲನಚಿತ್ರ ಬಿಡುಗಡೆ ಮುಂದೂಡಿಕೆ

0
'Sharanara Shakti' movie release postponed
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ವಿಶ್ವಗುರು ಬಸವಣ್ಣ ಹಾಗೂ ಚಿನ್ಮಯ ಜ್ಞಾನಿ ಚನ್ನಬಸವಣ್ಣ ಅವರ 12ನೇ ಶತಮಾನದ ಸಮಾನತೆ ಸಾರುವ ಬಹು ನಿರೀಕ್ಷಿತ ಕನ್ನಡ ಚಲನ ಚಿತ್ರ `ಶರಣರ ಶಕ್ತಿ’ ಬಿಡುಗಡೆಯನ್ನು ಮುಂದೂಡಲಾಗಿದೆ.

Advertisement

ಅ.18ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದ ಚಿತ್ರಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ, ಮಠಾಧೀಶರು, ಬಸವ ಸಮಿತಿ, ಶರಣ ಸಂಘಟನೆಗಳು ಚಿತ್ರದ ಕುರಿತು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಶರಣರ ಶಕ್ತಿ’ ಚಿತ್ರವನ್ನು ನಾಡಿನ ಹೆಸರಾಂತ ಶರಣರು, ಜಗದ್ಗುರುಗಳು, ಗಣ್ಯರು, ಜಾಗತಿಕ ಲಿಂಗಾಯತ ಸಂಘಟನೆಯ ಪ್ರಮುಖರು ವೀಕ್ಷಿಸಿ ಹಲವಷ್ಟು ಸಲಹೆಗಳನ್ನು ನೀಡಿದರು.
ಶ್ರೀಶ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜೊತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿ ಮನೋಜ್ಞ ಅಭಿನಯ ಮಾಡಿದ್ದಾರೆ. ಪದ್ಮ ವಿಭೂಷಣ ಡಾ.ರಾಜ್‌ಕುಮಾರ್ ಸಂಸ್ಥೆಯ ವಜ್ರೇಶ್ವರಿ ಕಂಬೈನ್ಸ್ದಲ್ಲಿ ಕೆಲಸ ಮಾಡಿರುವ ದಿಲೀಪ್ ಶರ್ಮ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಶರಣ ಮಡಿವಾಳ ಮಾಚಿದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅ. 18ರಂದು ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ, ಪೂಜ್ಯ ಜಗದ್ಗುರುಗಳ ಸಲಹೆ ಮೇರೆಗೆ ಮುಂದೂಡಲಾಗಿದೆ. ನಂತರದಲ್ಲಿ ಜಗದ್ಗುರುಗಳ ಜೊತೆ ಚರ್ಚಿಸಿ ಚಿತ್ರದ ಬಿಡುಗಡೆ ದಿನಾಂಕ ನಿಗದಿಪಡಿಸಲಾಗುವದು ಎಂದು ಚಿತ್ರದ ನಿರ್ಮಾಪಕಿ ಆರಾಧನಾ ಕುಲಕರ್ಣಿ, ನಿರ್ದೇಶಕರರಾದ ದಿಲೀಪ್ ಶರ್ಮ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here