ಶಿವಮೊಗ್ಗ:- ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿರುವ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜರುಗಿದೆ.
ನೂರ್ ಅಫ್ಸಾ (25) ಮೃತ ಬಾಣಂತಿ. ಇವರು ಶಿವಮೊಗ್ಗದ ಇಮಾಂಬಾಡಾ ಬಡಾವಣೆಯ ನಿವಾಸಿ ಎನ್ನಲಾಗಿದೆ. ನ.20 ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ನ.21 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸಿಜೇರಿಯನ್ ಮೂಲಕ ಮಗುವನ್ನು ವೈದ್ಯರು ಹೊರತೆಗೆದಿದ್ದರು.
ಆಪರೇಷನ್ ಆದ ಎರಡು ದಿನದ ಬಳಿಕ ಮಹಿಳೆಗೆ ಮಲ ವಾಂತಿಯಾಗಿತ್ತು. ಬಳಿಕ ಪುನಃ ವೈದ್ಯರು ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ ಮಹಿಳೆ ಸಾವನ್ನಪ್ಪಿದ್ದಳು. ಮೃತಳಿಗೆ 3 ವರ್ಷದ ಹೆಣ್ಣು ಮಗು ಮತ್ತು 8 ದಿನದ ಗಂಡು ಮಗುವಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



