ಬಸವಕೇಂದ್ರದಲ್ಲಿ ಶಿವಾನುಭವ ಕಾರ್ಯಕ್ರಮ

0
mallikarjuna
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ 1499ನೇ ಶಿವಾನುಭವ ನೆರವೇರಿತು. ಬಸವ ಕೇಂದ್ರದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಅಲ್ಲಮಪ್ರಭು ದೇವರು ತಮ್ಮ ವಚನವೊಂದರಲ್ಲಿ, ದೇವರು ಎಲ್ಲೋ ದೂರ ಇರುವುನೆಂದು ಭಾವಿಸಿರುತ್ತೇವೆ, ಅಷ್ಟೇ ಏಕೆ, ಅನೇಕರು ಅನೇಕ ವೃತ-ನಿಯಮಾದಿಗಳನ್ನು ಆಚರಿಸುತ್ತಾರೆ, ಇವನ್ನೆಲ್ಲಾ ಕೆಲವರು ಮೂಢತೆಯಿಂದ ಮಾಡಿದರೆ ಇನ್ನೂ ಕೆಲವರು ಕಾಟಾಚಾರಕ್ಕಾಗಿ ಮಾಡುವರು. ದೇವರನ್ನು ಕಾಣುವ ರೀತಿ ಇದಲ್ಲ. ಇನ್ನು ಕೆಲವರಿಗೆ ದೇವರ ಕಲ್ಪನೆಯೇ ಇರುವುದಿಲ್ಲ. ಇಂಥವರಿಗೆ ನಾಸ್ತಿಕರೆನ್ನುತ್ತಾರೆ. ನಾವು ಸದಾ ಪರಿಶುದ್ಧ ಮನಸ್ಸಿನಿಂದ ಭಕ್ತಿ ಪೂರ್ವಕವಾಗಿ ದೇವನನ್ನು ನೆನೆದರೆ ಸಾಕು. ದೇವರನ್ನು ನಮ್ಮಲ್ಲಿಯೇ ಕಾಣಬಹುದು ಎಂದು ತಿಳಿಸಿದ್ದಾರೆ ಎಂದರು.

Advertisement

ವೇದಿಕೆಯ ಮೇಲೆ ಶಿಲ್ಪಾ ಖಂಡಮ್ಮನವರ, ಜಯಶ್ರೀ ಖಂಡಮ್ಮನವರ, ಅನಸೂಯಾ ಖಂಡಮ್ಮನವರ, ಮಕ್ಕಳು ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆಯನ್ನು ಪ್ರಶಾಂತ ಬ.ಖಂಡಮ್ಮನವರ ನಿರ್ವಹಿಸಿದರು. ಸಂತೋಷ ನಾಯ್ಕರ ಸ್ವಾಗತಿಸಿ ನಿರೂಪಿಸಿದರು. ಕೊನೆಗೆ ವಚನ ಮಂಗಲಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಪ್ರಶಾಂತ ರಣತೂರ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here