HomeGadag Newsಮಾದಿಗ ಸಮಾಜವನ್ನು ಕಡೆಗಣಿಸದಿರಿ

ಮಾದಿಗ ಸಮಾಜವನ್ನು ಕಡೆಗಣಿಸದಿರಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮಾದಿಗ ಸಮಾಜದ ಮುಖಂಡರಾದ ವಿಜಯ ಮಲ್ಲೇಶ ಕಲ್ಮನಿ, ಮಾರ್ತಂಡಪ್ಪ ಹಾದಿಮನಿ ಇವರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಸ್ಥಾನಮಾನ ನೀಡುವಂತೆ ಉಡಚಪ್ಪ ಹಳ್ಳಿಕೇರಿ, ಅಶೋಕ ಹಾದಿಮನಿ ಸೇರಿದಂತೆ ಮಾದಿಗ ಸಮಾಜದ ಹಿರಿಯರು, ಯುವಕರು ಸಚಿವರಾದ ಹೆಚ್.ಕೆ. ಪಾಟೀಲರನ್ನು ಭೇಟಿಯಾಗಿ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯ ಸಂಚಾಲಕ ಉಡಚಪ್ಪ ಹಳ್ಳಿಕೇರಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಸಾಕಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮಾಜ ಇದುವರೆಗೆ ಕಾಂಗ್ರೆಸ್ ಪಕ್ಷವನ್ನೇ ನಂಬಿ ಬೆಂಬಲಿಸುತ್ತಿದೆ. ಇದುವರೆಗೆ ನಮ್ಮ ಸಮಾಜಕ್ಕೆ ಯಾವುದೇ ತರಹದ ಸ್ಥಾನವನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ.
ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜವು ಇನ್ನೂ ಹುಮ್ಮಸ್ಸಿನಿಂದ, ಹುರುಪಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದು, ನಿಗಮ ಮಂಡಳಿ ಅಥವಾ ಇನ್ನಾವುದು ಹುದ್ದೆ ನೀಡಿ ಈ ಸಮಾಜಕ್ಕೆ ಋಣಿಯಾಗಿ ಎಂದು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಸಚಿವ ಡಾ. ಎಚ್.ಕೆ. ಪಾಟೀಲ, ಮಾದಿಗ ಸಮುದಾಯದ ಮುಖಂಡರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ- ಮಾನ ಕೊಡುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img