ರಾಯಚೂರು:-ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಹೇಳಿಕೆ ನೀಡಿದ್ದಾರೆ.
Advertisement
ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಶಿಲ್ಪಾ ಶೆಟ್ಟಿ, ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಕೇಳಿ ಭಾರೀ ಶಾಕ್ ಆಗಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದರು.
ಮುಂಬೈ ಪೊಲೀಸರು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದವನನ್ನ ಕೂಡಲೇ ಬಂಧಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು. ಇನ್ನೂ ರಾಯಚೂರಿಗೆ ಬಂದಿರುವುದು ನಾನು ನಮ್ಮ ಊರಿಗೆ ಬಂದಂತೆ ಆಗಿದೆ. ನನ್ನ ಕನ್ನಡದ ಮುಂದಿನ ಸಿನಿಮಾ ಡೆವಿಲ್ ಹಾಗೂ ಕೆಡಿ ಬರುತ್ತಿವೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಬಗ್ಗೆ ನನಗೆ ಭಾರೀ ಕುತೂಹಲ ಇದೆ ಎಂದು ಹೇಳಿದ್ದಾರೆ.