ಶಾಕಿಂಗ್ ವರದಿ ಬಹಿರಂಗ: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಕೆ ದೃಢ!

0
Spread the love

ಬೆಂಗಳೂರು:- ಶಾಕಿಂಗ್ ವರದಿಯೊಂದು ಬಹಿರಂಗ ಆಗಿದ್ದು, ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಕೆ ದೃಢವಾಗಿದೆ.

Advertisement

ಸಧ್ಯ ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ಮಾಡಿದ್ದು ಖಚಿತವಾಗಿದ್ದು, ಇದರ ಬೆನ್ನಲ್ಲೇ ಬೆಲ್ಲದಲ್ಲಿಯೂ ಕಲಬೆರಕೆಯ ಕೃತಕ ಬಣ್ಣ ಬಳಕೆ ಮಾಡಿರುವುದು ದೃಢವಾಗಿವಾಗಿದೆ. ಕೆಲ ದಿನಗಳ ಹಿಂದೆ ಆಹಾರ ಹಾಗೂ ಗುಣಮಟ್ಟ ಇಲಾಖೆ ವಿವಿಧ ಬೆಲ್ಲವನ್ನ ಸಂಗ್ರಹಿಸಿ ಬೆಲ್ಲವನ್ನ ಲ್ಯಾಬ್ ರಿಪೋರ್ಟ್​ಗೆ ಕಳುಹಿಸಲಾಗಿತ್ತು. ಈ ವೇಳೆ ಬೆಲ್ಲದಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ. ಇನ್ನು ಸದರಿ ಬೆಲ್ಲವನ್ನ ಉಪಯೋಗಿಸಿದರೆ ಆರೋಗ್ಯದ ಮೇಲೆ ಮಾರಕ ಪರಿಣಾಮಗಳು ಉಂಟಾಗಲಿದೆಯಂತೆ.‌

ದೇವಸ್ಥಾನಗಳಲ್ಲಿ ಹೆಚ್ಚಾಗಿ ಪ್ರಸಾದಕ್ಕೆ ಬೆಲ್ಲ ಬಳಕೆಯಾಗಲಿದ್ದು, ಹೀಗಾಗಿ ಬೆಲ್ಲವನ್ನ ಬಳಸುವಾಗ ಪರಿಶೀಲಿಸಿ ಬಳಸಲು ಮುಜರಾಯಿ ಇಲಾಖೆ ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರಿಗೆ ಆಹಾರ ಸುರಕ್ಷತೆ ಆಯುಕ್ತರು ಪತ್ರ ಬರೆದಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಸಾರ್ವಜನಿಕರು, ‘ಬೆಲ್ಲದಲ್ಲಿ ಕಲಬೆರಕೆಯ ಬಣ್ಣ ಬಳಸಿದ್ದಾರೆ ಎಂದು ಹೇಳುತ್ತಿದ್ದಾರೆ.‌ ಬೆಲ್ಲವನ್ನ ಸಿಹಿ ಅಡುಗೆಗಳಿಗೆ ಹೆಚ್ಚಾಗಿ ಬಳಸುತ್ತೇವೆ. ಆದ್ರೆ, ಇದರಲ್ಲೂ ಬಣ್ಣ ಬಳಕೆ ಮಾಡಿದರೆ ಹೇಗೆ ಬಳಸೋದು.‌ ಈ ಕುರಿತಾಗಿ ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here