ಅನುಮತಿ ಇಲ್ಲದೇ ಅರಣ್ಯ ಭೂಮಿಯಲ್ಲಿ ಶೂಟಿಂಗ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ತುಮಕೂರಿನ ನಾಮದ ಚಿಲುಮೆಯಲ್ಲಿ ನಾವು ಚಿತ್ರೀಕರಣ ಮಾಡಿಲ್ಲ. ಸ್ಥಳದ ಹತ್ತಿರದಲ್ಲೇ ಡಾಬಾ ಇದ್ದಿದ್ರಿಂದ ಪ್ರೊಡಕ್ಷನ್ ಯುನಿಟ್ ನಿಲ್ಲಿಸಿದ್ವಿ ಅಷ್ಟೇ. ಅದನ್ನು ನೋಡಿದ ದಾರಿಹೋಕರು ಶೂಟಿಂಗ್ ಮಾಡುತ್ತಿದ್ದೇವೆ ಎಂದುಕೊಂಡು ದೂರು ಕೊಟ್ಟಿರಬಹುದು. ಆ ವೇಳೆ, ಸ್ಥಳಕ್ಕೆ ಅಧಿಕಾರಿಗಳು ಬಂದು ದಂಡ ಹಾಕಿದ್ದರು, ನಾವು ಕಟ್ಟಿದ್ದೇವೆ ಎಂದಿದ್ದಾರೆ. ತಿಂಗಳ ಹಿಂದೆಯೇ ನಾವು ಶೂಟಿಂಗ್‌ಗೆ ಅನುಮತಿ ಅರ್ಜಿ ಹಾಕಿದ್ದು ನಿಜ. ಆದರೆ ಅಧಿಕಾರಿಗಳು ಅನುಮತಿ ಕೊಟ್ಟಿಲ್ಲ ಅಂತ ಚಿತ್ರೀಕರಣ ಮಾಡಿಲ್ಲ. ಸ್ಥಳದಲ್ಲಿ ನಾವ್ಯಾರೂ ಇರಲಿಲ್ಲ, ಯುನಿಟ್ ಹುಡುಗರಿದ್ದರು ಎಂದಿದ್ದಾರೆ.